ಸೋಮವಾರ, ಮೇ 17, 2021
31 °C

ಸಚಿನ್ ಗೆ ಬೋರ್ ಆಗದಿರಲಿ: ಹೇಮಾಮಾಲಿನಿ ಹಾರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ~ರಾಜ್ಯ ಸಭೆ ಇರುವುದು ನಿವೃತ್ತರಿಗಾಗಿ. ತನ್ನ ಹೊಸ ಹೊಣೆಗಾರಿಕೆ ನಿಭಾಯಿಸುವಲ್ಲಿ ಸಚಿನ್ ತೆಂಡೂಲ್ಕರ್ ಅವರಿಗೆ ಬೋರ್ ಆಗದಿರಲಿ ಎಂದು ಹಾರೈಸೋಣ~  ಎಂದು ಮಾಜಿ ಸಂಸತ್ ಸದಸ್ಯೆ ಚಿತ್ರ ನಟಿ ಹೇಮಾಮಾಲಿನಿ ಶುಕ್ರವಾರ ಇಲ್ಲಿ ಹೇಳಿದರು.~ಇದು ಅತ್ಯಂತ ಪ್ರತಿಷ್ಠೆಯ ವಿಷಯ. ಸಚಿನ್ ಅವರ ಈ ನೇಮಕಾತಿ ನನಗೆ ಸಂತಸ ನೀಡಿದೆ. ಇದು (ರಾಜ್ಯಸಭೆ) ನಿವೃತ್ತ ಜನರಿಗಾಗಿ ಇರುವಂತಹುದು. ಅವರು ಇನ್ನೂ ನಿವೃತ್ತರಾಗಿಲ್ಲ ಎಂಬುದು ನನ್ನ ಭಾವನೆ. ಅವರಿಗೆ ಬೋರ್ ಆಗದಿರಲಿ ಎಂದು ನಾನು ಹಾರೈಸುವೆ~ ಎಂದು ಹೇಮಾ ಪಿಟಿಐ ಜೊತೆಗೆ ಮಾತನಾಡುತ್ತಾ ಹೇಳಿದರು.ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರನ್ನು ಬಾಲಿವುಡ್ ಚಿತ್ರ ನಟಿ ರೇಖಾ ಮತ್ತು ಕೈಗಾರಿಕೋದ್ಯಮಿ ಅನು ಅಗಾ ಅವರ ಜೊತೆಗೆ ಗುರುವಾರ ರಾಜ್ಯಸಭೆಗೆ ನೇಮಕ ಮಾಡಲಾಗಿದೆ.ಸಂಸತ್ತಿನಲ್ಲೂ 39ರ ಹರೆಯದ ಕ್ರಿಕೆಟಿಗನ ಖ್ಯಾತಿ ಹೆಚ್ಚಲಿ ಎಂದು ಖ್ಯಾತ ನಿರ್ದೇಶಕ ಮಹೇಶ ಭಟ್ ಹಾರೈಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.