ಸಚಿನ್ ಜತೆಗೆ ಮಾತನಾಡಿ...

7

ಸಚಿನ್ ಜತೆಗೆ ಮಾತನಾಡಿ...

Published:
Updated:
ಸಚಿನ್ ಜತೆಗೆ ಮಾತನಾಡಿ...

`ಎಕ್ಸ್‌ಪ್ರೆಸ್ ಯುವರ್‌ಸೆಲ್ಫ್~ ಎಂಬ ಕ್ಯಾಚಿ ಟ್ಯಾಗ್‌ಲೈನ್‌ನೊಂದಿಗೆ ದೂರಸಂಪರ್ಕ ಕ್ಷೇತ್ರಕ್ಕೆ ಕಾಲಿರಿಸಿದ ಏರ್‌ಟೆಲ್ ಈಗ ಎಲ್ಲರ ಮನಸ್ಸಿಗೆ ಹತ್ತಿರವಾಗಿದೆ.

 

ಏಷ್ಯಾ ಹಾಗೂ ಆಫ್ರಿಕಾ ಖಂಡ ಸೇರಿದಂತೆ 20 ದೇಶದಲ್ಲಿ ತನ್ನ ಹರವು ವಿಸ್ತರಿಸಿಕೊಂಡಿರುವ ಏರ್‌ಟೆಲ್ ತನ್ನ ಗ್ರಾಹಕರಿಗಾಗಿ `ಏರ್‌ಟೆಲ್ ಟಾಕ್2ಮಿ~ ಎಂಬ ರೋಮಾಂಚಕ ಕಾರ್ಯಕ್ರಮ ಆಯೋಜಿಸಿದೆ. ಇದರಲ್ಲಿ ಆಯ್ಕೆಯಾದ ಅದೃಷ್ಟಶಾಲಿಗಳು ಸಚಿನ್ ಅವರೊಂದಿಗೆ ಮಾತನಾಡುವ ಅವಕಾಶ ಪಡೆದುಕೊಳ್ಳಲಿದ್ದಾರೆ.ಎಲ್ಲ ಏರ್‌ಟೆಲ್ ಗ್ರಾಹಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಈ ಮೂಲಕ ಕ್ರಿಕೆಟ್‌ನ ಜೀವಂತ ದಂತಕತೆ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಮಾತನಾಡುವ ಕನಸನ್ನು ನನಸಾಗಿಸಿಕೊಳ್ಳಬಹುದು.ಕ್ರಿಕೆಟ್‌ನ್ನು ಪ್ರೀತಿಸುವ ಹಾಗೂ ಸಚಿನ್ ಅವರನ್ನು ಆರಾಧಿಸುವ ಎಲ್ಲ ಅಭಿಮಾನಿಗಳೂ `ಏರ್‌ಟೆಲ್ ಟಾಕ್2ಮಿ~ ಕಾರ್ಯಕ್ರಮದಲ್ಲಿ ಅವರೊಂದಿಗೆ ನೇರವಾಗಿ ಹರಟುವ, ಸಂವಾದ ನಡೆಸುವ ಅವಕಾಶ ತಮ್ಮದಾಗಿಸಿಕೊಳ್ಳಲಿದ್ದಾರೆ. `ಏರ್‌ಟೆಲ್ ಟಾಕ್2ಮಿ~ ಕಾರ್ಯಕ್ರಮ ಇಂದು (ಶುಕ್ರವಾರ) ಮಧ್ಯಾಹ್ನ 2ರಿಂದ 3ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಏರ್‌ಟೆಲ್ ಗ್ರಾಹಕರು 5100100 ನಂಬರ್‌ಗೆ ಕರೆಮಾಡಿ ಸಚಿನ್ ಅವರೊಂದಿಗೆ ಮಾತನಾಡಬಹುದು.ಕರೆಮಾಡಿದ ಗ್ರಾಹಕರು ನೋಂದಣಿ ಶುಲ್ಕ ರೂ.30 ಮತ್ತು ಮಾತನಾಡುವಾಗ ಪ್ರತಿ ಸೆಕೆಂಡ್‌ಗೆ 3 ಪೈಸೆಯಂತೆ ಶುಲ್ಕ ತೆರಬೇಕು. ಏರ್‌ಟೆಲ್ ಟಾಕ್2ಮಿ ಕಾರ್ಯಕ್ರಮದಲ್ಲಿ ಕರೆಸಿಕ್ಕ ಗ್ರಾಹಕ ಗುಂಪಿನೊಂದಿಗೆ ಸಚಿನ್ ಅನುಕ್ರಮವಾಗಿ ಮಾತನಾಡಲಿದ್ದಾರೆ.ಈ ಸಂದರ್ಭದಲ್ಲಿ ಸರತಿಯಲ್ಲಿರುವ ಇತರೆ ಗ್ರಾಹಕರು ಇವರ ಸಂಭಾಷಣೆಯನ್ನು ಆಲಿಸಬಹುದು. ನಂತರ ಮತ್ತೊಬ್ಬರೊಂದಿಗೆ ಮಾತು ಮುಂದುವರಿಯುತ್ತದೆ. ಮಾತನಾಡುವ ಅವಕಾಶ ಸಿಕ್ಕ ಏರ್‌ಟೆಲ್ ಗ್ರಾಹಕರು ಸಚಿನ್ ಅವರೊಂದಿಗೆ ಚುಟುಕಾಗಿ ಸಂವಾದ ನಡೆಸಬೇಕು.ಯಾಕಂದ್ರೆ, ಕರೆ ಮಾಡಿದ ಪ್ರತಿ ಗ್ರಾಹಕರೊಟ್ಟಿಗೆ ಇಂತಿಷ್ಟು ಸಮಯ ಅಂತ ನಿಗದಿಯಾಗಿರುತ್ತದೆ. ತಾಂತ್ರಿಕ ದೋಷದಿಂದಾಗಿ ಏನಾದರೂ ಗ್ರಾಹಕರಿಗೆ ಸಚಿನ್ ಅವರೊಂದಿಗೆ ಮಾತನಾಡುವ ಅವಕಾಶ ಸಿಗದಿದ್ದರೆ ಅಂತಹವರಿಗೆ  ಮತ್ತೊಂದು ಅವಕಾಶ ನೀಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry