ಶುಕ್ರವಾರ, ನವೆಂಬರ್ 15, 2019
27 °C

ಸಚಿನ್ ಮೇಣದ ಪ್ರತಿಮೆ ಅನಾವರಣ

Published:
Updated:
ಸಚಿನ್ ಮೇಣದ ಪ್ರತಿಮೆ ಅನಾವರಣ

ಸಿಡ್ನಿ (ಪಿಟಿಐ): ಸಚಿನ್ ತೆಂಡೂಲ್ಕರ್ ಅವರ ಸಾಧನೆಗೆ ಮತ್ತೊಂದು ಗೌರವ ಒಲಿದಿದೆ. ಶನಿವಾರ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ (ಎಸ್‌ಸಿಜಿ) ಅವರ ಮೇಣದ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.ಏಪ್ರಿಲ್ 24ರಂದು ಸಚಿನ್ 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಇದಕ್ಕೆ ನಾಲ್ಕು ದಿನ ಮುಂಚಿತವಾಗಿ ಪ್ರತಿಮೆ ಅನಾವರಣಗೊಂಡಿರುವುದು ಸಚಿನ್ ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದೆ.ಎಸ್‌ಸಿಜೆಯಲ್ಲಿ ಅನಾವರಣಗೊಂಡ ಸಚಿನ್ ಪ್ರತಿಮೆ, ಲಂಡನ್‌ನ ಮೇಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯದಲ್ಲಿರುವ ಪ್ರತಿಮೆ ಯಂತೆಯೇ ಇದೆ. ಭಾರತ ಕ್ರಿಕೆಟ್ ತಂಡದ ಏಕದಿನ ಪಂದ್ಯದ ಜರ್ಸಿ ಧರಿಸಿರುವ ಸಚಿನ್, ಶತಕ ಬಾರಿಸಿದ ಬಳಿಕ ಬ್ಯಾಟ್ ಮತ್ತು ಹೆಲ್ಮೆಟನ್ನು ಮೇಲೆ ಹಿಡಿದು ಸಂಭ್ರಮಾಚರಣೆ ಮಾಡುತ್ತಿರುವ ರೀತಿಯಲ್ಲಿ ರಚಿಸಲಾಗಿದೆ.ಈ ಪ್ರತಿಮೆಯನ್ನು ಮುಂದಿನ ದಿನಗಳಲ್ಲಿ ಡಾರ್ಲಿಂಗ್ ಹಾರ್ಬರ್‌ನಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಸರ್ ಬ್ರಾಡ್ಮನ್ ಮತ್ತು ಶೇನ್ ವಾರ್ನ್ ಪ್ರತಿಮೆಗಳ ಜೊತೆಗೇ ಪ್ರದರ್ಶನಕ್ಕೆ ಇರಿಸಲಾಗುತ್ತದೆ.ಪ್ರತಿಮೆಯ ಅನಾವರಣ ಸಂದರ್ಭದಲ್ಲಿ ಸಚಿನ್ ಅವರಿಗೆ ಶುಭ ಹಾರೈಸುವ ಘೋಷಣೆಗಳು ಮತ್ತು ಹಾಡುಗಳು ಕೇಳಿಬಂದವು. ಕೆಲವರು ಪ್ರತಿಮೆಯ ಕಾಲಿಗೆ ನಮಸ್ಕಾರ ಮಾಡಿ ಅಭಿಮಾನ ಮೆರೆದರು.

ಪ್ರತಿಕ್ರಿಯಿಸಿ (+)