ಬುಧವಾರ, ನವೆಂಬರ್ 20, 2019
25 °C

ಸಚಿನ್ ಮೋಡಿಯ ನಿರೀಕ್ಷೆಯಲ್ಲಿ `ಇಂಡಿಯನ್ಸ್'

Published:
Updated:

ಕೋಲ್ಕತ್ತ (ಪಿಟಿಐ): ನಲ್ವತ್ತನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸಚಿನ್ ತೆಂಡೂಲ್ಕರ್ ಅವರ ಮೇಲೆ ಮುಂಬೈ ಇಂಡಿಯನ್ಸ್‌ಗೆ ಈಗ ಅಪಾರ ನಿರೀಕ್ಷೆ. ಜನ್ಮ ದಿನದ ಸಂಭ್ರಮದ ನೆಪದಲ್ಲಿ ಸಚಿನ್ ಅವರಿಂದ ಈ ತಂಡದವರು ಉತ್ತಮ ಆಟದ ನಿರೀಕ್ಷೆಯಲ್ಲಿದ್ದಾರೆ. ತೆಂಡೂಲ್ಕರ್ ಕೂಡ ತಮ್ಮ ಅಭಿಮಾನಿಗಳಿಗೆ ಒಲವಿನ ಉಡುಗೊರೆ ನೀಡಲು ಸನ್ನದ್ದರಾಗಿದ್ದಾರೆ.ಬುಧವಾರ ರಾತ್ರಿ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದವರು ಕೋಲ್ಕತ್ತ ನೈಟ್ ರೈಡರ್ಸ್ ಸವಾಲು ಎದುರಿಸಲಿದ್ದಾರೆ. ಉಭಯ ತಂಡಗಳಿಗೆ ಈ ಪಂದ್ಯ ತುಂಬಾ ಮುಖ್ಯವಾಗಿದೆ.ಮುಂಬೈ ಇಂಡಿಯನ್ಸ್ ತಂಡದವರು ಈ ಬಾರಿಯ ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದಿದ್ದರು. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ಈ ತಂಡ ವಿಫಲವಾಗಿದೆ. ಆಡಿರುವ ಆರು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಹಾಗೂ ಮೂರರಲ್ಲಿ ಸೋಲು ಕಂಡಿದೆ. ಕೇವಲ ಆರು ಪಾಯಿಂಟ್ ಹೊಂದಿದೆ.ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಸಚಿನ್ 54 ರನ್ ಗಳಿಸಿ ಫಾರ್ಮ್‌ಗೆ ಮರಳಿರುವ ಸೂಚನೆ ನೀಡಿದ್ದಾರೆ. 

ಇತ್ತ ಕೋಲ್ಕತ್ತ ನೈಟ್ ರೈಡರ್ಸ್ ತಂಡದವರು ಕೂಡ ಗೆಲುವಿಗಾಗಿ ತಂತ್ರ ರೂಪಿಸುತ್ತಿದ್ದಾರೆ. ಹೋದ ಬಾರಿ ಚಾಂಪಿಯನ್ ಆಗಿದ್ದ ಈ ತಂಡ ಈ ಬಾರಿ ಅಷ್ಟಕಷ್ಟೆ. ಆಡಿದ ಆರು ಪಂದ್ಯಗಳಿಂದ ಕೇವಲ ಎರಡರಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಪ್ರತಿಕ್ರಿಯಿಸಿ (+)