ಭಾನುವಾರ, ಅಕ್ಟೋಬರ್ 20, 2019
22 °C

ಸಚಿನ್ ವಿಕೆಟ್ ಖುಷಿ ನೀಡಿದೆ: ಜೇಮ್ಸ ಪ್ಯಾಟಿನ್‌ಸನ್

Published:
Updated:

ಸಿಡ್ನಿ (ಪಿಟಿಐ): ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಕಬಳಿಸಿದ್ದು ವಿಶೇಷ ಅನುಭವ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಯುವ ವೇಗದ ಬೌಲರ್ ಜೇಮ್ಸ ಪ್ಯಾಟಿನ್‌ಸನ್ ನುಡಿದಿದ್ದಾರೆ.`ಸಚಿನ್ ವಿಕೆಟ್ ನನಗೆ ಲಭಿಸಿದ್ದು ಅದೃಷ್ಟದ ರೂಪದಲ್ಲಿ. ಏಕೆಂದರೆ ಹೊರಹೋಗುತ್ತಿದ್ದ ಚೆಂಡನ್ನು ಡ್ರೈವ್ ಮಾಡಲು ಮುಂದಾದಾಗ ಅದು ಬ್ಯಾಟ್‌ಗೆ ತಾಗಿ ವಿಕೆಟ್‌ಗೆ ಅಪ್ಪಳಿಸಿತು. ಆದರೆ ಅವರ ವಿಕೆಟ್ ನನಗೆ ಲಭಿಸಿದ್ದು ಒಂದು ವಿಶೇಷ ಅನುಭವ. ಅದೊಂದು ಮರೆಯಲಾಗದ ಕ್ಷಣ~ ಎಂದು ಪ್ಯಾಟಿನ್‌ಸನ್ ಹೇಳಿದ್ದಾರೆ.`ಆದರೆ ಆರಂಭದ ವಿಕೆಟ್‌ಗಳನ್ನು ಬೇಗನೇ ಕಬಳಿಸಿದರೆ ಉಳಿದವರು ಒತ್ತಡಕ್ಕೆ ಒಳಗಾಗುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ. ಭಾರತದವರೂ ಅಂಥ ಸಂಕಷ್ಟದಲ್ಲಿ ಸಿಲುಕಿದರು~ ಎಂದು ನುಡಿದರು.

Post Comments (+)