`ಸಚಿನ್ ಶೂ ಲೇಸ್ ಕಟ್ಟುವ ಯೋಗ್ಯತೆಯೂ ಇಲ್ಲ'

7

`ಸಚಿನ್ ಶೂ ಲೇಸ್ ಕಟ್ಟುವ ಯೋಗ್ಯತೆಯೂ ಇಲ್ಲ'

Published:
Updated:

ಕೋಲ್ಕತ್ತ: `ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಬೇರೆಯವರು ಏನು ಹೇಳುತ್ತಾರೆ ಎಂಬುದು ಮರೆತುಬಿಡಿ. ಆದರೆ ಅವರ ಶೂ ಲೇಸ್ ಕಟ್ಟುವ ಯೋಗ್ಯತೆಯೂ ಉಳಿದವರಿಗೆ ಇಲ್ಲ' ಎಂದು ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಹೇಳಿದ್ದಾರೆ.`ತೆಂಡೂಲ್ಕರ್ ಸ್ಥಾನ ತುಂಬಲು ಅಸಾಧ್ಯ. ಅಂಥ ಆಟಗಾರರು ಸದ್ಯಕ್ಕೆ ಯಾರೂ ಕಾಣುತ್ತಿಲ್ಲ. ತಂಡಕ್ಕೆ ಹಿಂದೆಂದಿಗಿಂತಲೂ ಈಗ ಸಚಿನ್ ಅವರ ಅಗತ್ಯ ಹೆಚ್ಚಿದೆ' ಎಂದು ಅವರು ಸ್ಥಳೀಯ ಪತ್ರಿಕೆ `ದಿ ಟೆಲಿಗ್ರಾಫ್'ಗೆ ತಿಳಿಸಿದ್ದಾರೆ.ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯದಲ್ಲಿ ರವಿಶಾಸ್ತ್ರಿ `ಸ್ಟಾರ್ ಕ್ರಿಕೆಟ್'ನ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry