ಸಚಿವರಾಗಿ ಡಿ.ಕೆ.ಶಿ, ಬೇಗ್ ಪ್ರಮಾಣ ವಚನ

7

ಸಚಿವರಾಗಿ ಡಿ.ಕೆ.ಶಿ, ಬೇಗ್ ಪ್ರಮಾಣ ವಚನ

Published:
Updated:

ಬೆಂಗಳೂರು: ಸುಮಾರು ಆರು ತಿಂಗಳ ಕಾಲ ನಡೆದ ‘ಶೀತಲ ಸಮರ’, ‘ಶಕ್ತಿ  ಪ್ರದರ್ಶನ’ದ ಬಳಿಕ ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ಮತ್ತು  ಶಿವಾಜಿನಗರ ಶಾಸಕ ಆರ್‌.ರೋಷನ್ ಬೇಗ್ ಅವರು ಹೊಸ ವರ್ಷದ (2014) ಮೊದಲ ದಿನವಾದ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.

ರಾಜಭವನದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂಜೆ ನಡೆದ ಸರಳ ಸಮಾರಂಭದಲ್ಲಿ ಡಿ.ಕೆ.ಶಿ ಹಾಗೂ ಬೇಗ್ ಅವರಿಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಪ್ರಮಾಣ ವಚನ ಬೋಧಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆದ ಮೂರನೇ ಸಂಪುಟ ವಿಸ್ತರಣೆ ಇದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry