ಸಚಿವರಿಗೆ ಕಾದು ಸುಸ್ತಾದ ಸಂಘಟನೆಗಳು

7

ಸಚಿವರಿಗೆ ಕಾದು ಸುಸ್ತಾದ ಸಂಘಟನೆಗಳು

Published:
Updated:
ಸಚಿವರಿಗೆ ಕಾದು ಸುಸ್ತಾದ ಸಂಘಟನೆಗಳು

ರಾಯಚೂರು: ಒಳಗಡೆ ಅಧಿಕಾರಿಗಳ ಗದ್ದಲ... ಹೊರಗಡೆ ಸಂಘಟನೆಗಳ ಕೂಗಾಟ... ಘೋಷಣೆ... ಅಲ್ಲಿ ಸಚಿವರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರೆ ಸಭಾಭವನದ ಹೊರಗಡೆ ಸಂಘಟನೆಗಳ ಸದಸ್ಯರು ಸರ್ಕಾರದ ನಿರ್ಲಕ್ಷ್ಯ ಧೋರಣೆ, ಬೇಡಿಕೆಗೆ ಸ್ಪಂದಿಸದೇ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದರು.ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಕೆ.ಡಿ.ಪಿ ಸಭೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಅಧ್ಯಕ್ಷತೆಯಲ್ಲಿ ನಡೆದ ಸಂದರ್ಭದಲ್ಲಿ ಕಾಣಿಸಿದ ದೃಶ್ಯಗಳಿವು.ಪ್ರತಿನಿತ್ಯ ಒಂದಿಲ್ಲೊಂದು ಬೇಡಿಕೆ ಈಡೇರಿಕೆಗೆ, ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಲೇ ಬಂದ ಸಂಘಟನೆಗಳು ಜಿಲ್ಲಾ ಉಸ್ತುವಾರಿ ಸಚಿವರು ಕೆಡಿಪಿ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಾರೆಂಬ ಸುದ್ದಿ ತಿಳಿದು ಸಭೆ ನಡೆದ ಜಿಲ್ಲಾ ಪಂಚಾಯಿತಿ ಸಭಾಭವನದ ಎದುರು ಸಚಿವರಿಗಾಗಿ ಕಾದು ನಿಂತರು.ಹನ್ನೊಂದು ಗಂಟೆಗೆ ಆಗಮಿಸಿ ಸಚಿವ ಬಿ. ಶ್ರೀರಾಮುಲು ಸಭೆ ಆರಂಭಿಸಿದರು. ಸಭೆ ಮಧ್ಯಾಹ್ನ 4ರವರೆಗೂ ನಡೆಯಿತು. ಅಲ್ಲಿಯವರೆಗೂ ವಿವಿಧ ಸಂಘಟನೆಗಳ ನೂರಾರು ಸದಸ್ಯರು, ಪದಾಧಿಕಾರಿಗಳು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಸುಡುಬಿಸಿಲಿನಲ್ಲಿಯೇ ಕಾದಿರಬೇಕಾಯಿತು. ಕೆಡಿಪಿ ಸಭೆ  ಬಳಿಕ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದ ಸಚಿವರು  ಮನವಿ ಸ್ವೀಕರಿಸಿ ಭರವಸೆ ನೀಡಿ ನಡೆದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry