ಗುರುವಾರ , ಆಗಸ್ಟ್ 22, 2019
22 °C

ಸಚಿವರ, ಅವರ ಬಂಧುಗಳ ಆಸ್ತಿ ತನಿಖೆಸಮಿತಿ ರಚನೆಗೆ ಒತ್ತಾಯ

Published:
Updated:

ಸೋಮವಾರ, 5-8-1963ಸಚಿವರ, ಅವರ ಬಂಧುಗಳ ಆಸ್ತಿ ತನಿಖೆಸಮಿತಿ ರಚನೆಗೆ ಒತ್ತಾಯ


ಕರ್ನಾಲ್, ಆ. 4- ಸಚಿವರ ಹಾಗೂ ಅವರ ಬಂಧುಗಳ ಆಸ್ತಿಪಾಸ್ತಿ ತನಿಖೆಗೆ ಒಂದು ಸಮಿತಿ ರಚನೆಯಾಗಬೇಕೆಂದು ಸೋಷಲಿಸ್ಟ್ ನಾಯಕ ಡಾ. ಲೋಹಿಯಾ ಇಂದು ಇಲ್ಲಿ ಒತ್ತಾಯ ಮಾಡಿದರು.ಡಾ. ಲೋಹಿಯಾ ಅವರು ಇಲ್ಲಿನ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, ಕಳೆದ ಹದಿನೈದು ವರ್ಷಗಳಲ್ಲಿ ಕಾಂಗ್ರೆಸ್ ಮಂತ್ರಿಗಳು, ಉನ್ನತಾಧಿಕಾರಿಗಳು, ಐಶ್ವರ್ಯವಂತರಾಗಿದ್ದಾರೆ. ಇದು ಲಂಚ-ಋಷವತ್ತು ಮತ್ತಿತರ ಅನೀತಿ ಮಾರ್ಗಗಳಿಗೆ ಎಡೆಕೊಟ್ಟಿದೆ ಎಂದರು.ಸಕ್ಕರೆ ಉತ್ಪಾದನೆ ಹೆಚ್ಚಿಸಲು ನಿರ್ಧಾರ

ಹೈದರಾಬಾದ್, ಆ. 4- ಸಕ್ಕರೆಯ ಉತ್ಪಾದನೆಯನ್ನು ಐದು ಲಕ್ಷ ಟನ್ನುಗಳಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರದ ಆಹಾರ ಹಾಗೂ ಕೃಷಿ ಸಚಿವ ಎಸ್.ಕೆ. ಪಾಟೀಲರು ಇಂದು ಇಲ್ಲಿ ತಿಳಿಸಿದರು.

Post Comments (+)