ಭಾನುವಾರ, ಜನವರಿ 26, 2020
27 °C
ಕುಲಪತಿಗಳ ನೇಮಕಾತಿಯಲ್ಲಿ ಅನಗತ್ಯ ವಿಳಂಬ

ಸಚಿವರ ಕಾರ್ಯವೈಖರಿ: ರಾಜ್ಯಪಾಲರ ಅತೃಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ‘ಸಿಎಂ ಸಿದ್ದ­ರಾಮಯ್ಯ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿ­ದ್ದಾರೆ. ಆದರೆ, ಕೆಲ ಸಚಿವರ ಕಾರ್ಯ­ವೈಖರಿಯಿಂದಾಗಿ ಅವರಿಗೆ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಲು ಸಾಧ್ಯವಾ­ಗುತ್ತಿಲ್ಲ’ ಎಂದು ರಾಜ್ಯಪಾಲ ಎಚ್‌.ಆರ್‌.­ ಭಾರ­ದ್ವಾಜ್‌ ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು.ಇಲ್ಲಿಗೆ ಸಮೀಪದ ಅರ್ಗಾದ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ನೌಕಾ ಸಪ್ತಾಹದಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಆ ಸಚಿವರಿಗೆ ಕಾರ್ಯವೈಖರಿ­ಯನ್ನು ಸರಿಪಡಿಸಿ­ಕೊಳ್ಳುವಂತೆ ಹಲವು ಬಾರಿ ಸಲಹೆ ನೀಡಿದ್ದೇನೆ. ಆದರೂ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಸರ್ಕಾರ ಇನ್ನೂ ಉತ್ತಮ­ವಾಗಿ ಕೆಲಸ ಮಾಡಲು ಸಚಿವರು, ಶಾಸಕರು ಮುಖ್ಯಮಂತ್ರಿಗೆ ಸಹಕಾರ ನೀಡಬೇಕು’ ಎಂದು ಸಲಹೆ ಮಾಡಿದರು.‘ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಸರ್ಕಾರ ಅನಗತ್ಯವಾಗಿ ವಿಳಂಬ ಮಾಡುತ್ತಿದೆ. ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡಿ ಸೂಚಿಸಿದರೆ ಅದಕ್ಕೆ ಒಪ್ಪಿಗೆ ನೀಡುತ್ತೇನೆ’ ಎಂದರು.

ಪ್ರತಿಕ್ರಿಯಿಸಿ (+)