ಸಚಿವರ ಡಾಕ್ಟರೇಟ್ ಪದವಿ ರದ್ದು

7

ಸಚಿವರ ಡಾಕ್ಟರೇಟ್ ಪದವಿ ರದ್ದು

Published:
Updated:

ಬರ್ಲಿನ್ (ಪಿಟಿಐ): ಜರ್ಮನಿಯ ರಕ್ಷಣಾ ಸಚಿವ ಕಾರ್ಲ್- ಥಿಯೊದರ್ ಗಟೆನ್‌ಬರ್ಗ್ ಅವರು ಕೃತಿ ಚೌರ್ಯ ಮಾಡಿದ ಆರೋಪದಲ್ಲಿ ಸಿಲುಕಿದ್ದು ಅವರ ಡಾಕ್ಟರೇಟ್ ಪದವಿಯನ್ನು ವಾಪಸ್ ಪಡೆಯಲಾಗಿದೆ.ಗಟೆನ್‌ಬರ್ಗ್ ಸಲ್ಲಿಸಿದ್ದ ಮಹಾಪ್ರಬಂಧದ ಅನೇಕ ಭಾಗಗಳು ಕೃತಿ ಚೌರ್ಯ ಮಾಡಿ ರಚಿಸಿದಂಥವು ಎಂಬುದು ಬೆಳಕಿಗೆ ಬಂದ ಒಂದು ವಾರದ ಬಳಿಕ ಬೈರೂತ್‌ನ ವಿಶ್ವವಿದ್ಯಾಲಯವು ಈ ಕ್ರಮ ಕೈಗೊಂಡಿದೆ.ಜರ್ಮನಿಯ ಸಂಸತ್‌ನಲ್ಲಿ ಗಟೆನ್‌ಬರ್ಗ್ ಅವರು ಈ ತಪ್ಪಿಗಾಗಿ ‘ಹೃದಯದಾಳದಿಂದ’ ಕ್ಷಮೆ ಕೋರುವುದಾಗಿ ತಿಳಿಸಿದ್ದರೂ ವಿವಿ ಬುಧವಾರ ಅವರ ಡಾಕ್ಟರೇಟ್ ಪದವಿ ಹಿಂದಕ್ಕೆ ಪಡೆದಿದೆ. ಈ ಆರೋಪಗಳ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಅವರು ನಿರಾಕರಿಸಿದ್ದಾರೆ.‘ಪ್ರಜಾಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಾಗಿ ನಾನು ವಂಚಿಸಿಲ್ಲ. ಆದರೆ ನಾನು ಪ್ರಮಾದ ಮಾಡಿದ್ದೇನೆ. ಬಿಡುವಿಲ್ಲದ ಕಾರ್ಯಭಾರದಿಂದ ಈ ತಪ್ಪು ಆಗಿದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry