ಸಚಿವರ ಭರವಸೆ: ಧರಣಿ ಹಿಂದಕ್ಕೆ

7

ಸಚಿವರ ಭರವಸೆ: ಧರಣಿ ಹಿಂದಕ್ಕೆ

Published:
Updated:

ಬೆಂಗಳೂರು: ವೇತನ ಅನುದಾನಕ್ಕೆ ಆಗ್ರಹಿಸಿ ಅನುದಾನ ರಹಿತ ಶಾಲಾ- ಕಾಲೇಜುಗಳ ಸಿಬ್ಬಂದಿ ಇದೇ 12ರಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಶುಕ್ರವಾರ ಹಿಂದಕ್ಕೆ ಪಡೆದಿದ್ದಾರೆ ಎಂದು ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ, ಶಿಕ್ಷಕ ಹಾಗೂ ನೌಕರರ ಒಕ್ಕೂಟದ ಅಧ್ಯಕ್ಷ ಜಾಲಮಂಗಲ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಸ್.ಎಲ್. ಜಾಧವ್ ತಿಳಿಸಿದ್ದಾರೆ.ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 1991ರಿಂದ 95ರವರೆಗೆ ಆರಂವಾಗಿರುವ ಶಾಲಾ-ಕಾಲೇಜುಗಳನ್ನೂ ಅನುದಾನಕ್ಕೆ ಒಳಪಡಿಸಲಾಗುವುದು ಎಂದು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಧರಣಿ ಸತ್ಯಾಗ್ರಹವನ್ನು ನಿಲ್ಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.1991ರವರೆಗೆ ಆರಂವಾಗಿರುವ ಶಾಲಾ-ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಪ್ರಕ್ರಿಯೆ ನವೆಂಬರ್‌ಗೆ ಪೂರ್ಣಗೊಳ್ಳಲಿದ್ದು, ಲಭ್ಯವಿರುವ ಹಣಕಾಸು ಹಾಗೂ ಪೂರಕ ಬಜೆಟ್‌ನಲ್ಲಿ ದೊರೆಯುವ ನೆರವನ್ನು ಆಧರಿಸಿ 1991ರಿಂದ 95ರವರೆಗೆ ಆರಂಭವಾಗಿರುವ ಶಾಲಾ- ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸಲು ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದು ನಾಗರಾಜು ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry