ಶನಿವಾರ, ಮೇ 15, 2021
22 °C

ಸಚಿವರ ವಿದೇಶ ಪ್ರಯಾಣಕ್ಕೆ ಷರೀಫ್ ಕತ್ತರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಐಎಎನ್‌ಎಸ್): ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ತಮ್ಮ ಸಚಿವರ, ಸಂಸತ್ ಸದಸ್ಯರ ಮತ್ತು ಇತರೆ ಸರ್ಕಾರಿ ಅಧಿಕಾರಿಗಳ ಅನವಶ್ಯಕ ವಿದೇಶ ಪ್ರಯಾಣವನ್ನು ನಿಷೇಧಿಸಿದ್ದಾರೆ.ಈ ಬಗ್ಗೆ ಅವರು, ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಿ, ವಾರ್ಷಿಕವಾಗಿ ತಮ್ಮ ವಿದೇಶ ಪ್ರಯಾಣವನ್ನು ಶೇ 30ಕ್ಕಿಂತ ಕಡಿಮೆ ಮಾಡಬೇಕು ಎಂದಿದ್ದಾರೆ.ಅನವಶ್ಯಕ ವಿದೇಶ ಪ್ರಯಾಣದ ಮಟ್ಟವನ್ನು ಶೇ 40ರಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಅನೇಕ ಶಿಫಾರಸ್ಸುಗಳನ್ನು ಹೊಂದಿರುವ ವರದಿಯನ್ನು ಪ್ರಧಾನಿ ಸಚಿವಾಲಯ ತಯಾರಿಸಿದೆ. ಇದರ ಪ್ರಕಾರ ಯಾವುದೇ ಒಬ್ಬ ಅಧಿಕಾರಿ ವಿದೇಶ ಪ್ರಯಾಣ ಬೆಳೆಸಬೇಕಾದ ಪಕ್ಷದಲ್ಲಿ ತಮ್ಮ ಹಿರಿಯ ಅಧಿಕಾರಿಗಳಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಾಗಿದೆ. ಈ ವರದಿಯ ಪ್ರಕಾರ, ಕೇಂದ್ರ ಸಚಿವರು ಪ್ರಧಾನಿಯವರ, ನ್ಯಾಷನಲ್ ಅಸೆಂಬ್ಲಿಯ ಸದಸ್ಯರು ಸ್ಪೀಕರ್‌ರವರ, ಕೆಳಮನೆಯ ಸದಸ್ಯರು ಮತ್ತು ಸೆನೆಟ್ ಸದಸ್ಯರು ಮೇಲ್ಮನೆಯ ಸಭಾಧ್ಯಕ್ಷರಿಂದ ಅನುಮತಿಯನ್ನು ಪಡೆಯಬೇಕಾಗಿದೆ.ಕಾನೂನು ವಿದ್ಯಾರ್ಥಿ ಸೆರೆ

ಬೆನಜೀರ್ ಭುಟ್ಟೊ ಹತ್ಯೆ ಮತ್ತು  ಮುಂಬೈ ದಾಳಿ ಪ್ರಕರಣದ ವಿಚಾರಣಾ ವಕೀಲ ಚೌಧರಿ ಝುಲ್ಫಿಕರ್ ಅಲಿ ಅವರ ಕೊಲೆ ಪ್ರಕರಣದಲ್ಲಿ ತಾಲಿಬಾನ್‌ನೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ 22 ವರ್ಷದ ಕಾನೂನು ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.ಅಬ್ದುಲ್ಲಾ ಉಮರ್, ಬಂಧಿತ ಅಂತರಾಷ್ಟ್ರೀಯ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ಕಾನೂನು ವಿದ್ಯಾರ್ಥಿ. ಈತ ಪಾಕ್ ಸೇನಾಧಿಕಾರಿಯ ಮಗ. ಈ ಸೇನಾಧಿಕಾರಿಯನ್ನು ಉಗ್ರಗಾಮಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕೆ ಸೇವೆಯಿಂದ ವಜಾ ಮಾಡಲಾಗಿದೆ.ಹಿಂದೂ ಶಾಸಕ

ಲಾಹೋರ್ (ಪಿಟಿಐ): ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಅಸೆಂಬ್ಲಿಗೆ 16 ವರ್ಷಗಳ ನಂತರ ಹಿಂದೂ ಒಬ್ಬರು ಮತ್ತು ಸ್ವಾತಂತ್ರ್ಯ ನಂತರ ಮೊದಲಬಾರಿಗೆ ಸಿಖ್ ಒಬ್ಬರು ಪ್ರವೇಶಿಸಿದ್ದಾರೆ.ಕಾಂಜಿ ರಾಮ್ ಪಂಜಾಬ್ ಅಸೆಂಬ್ಲಿಗೆ ಆಯ್ಕೆಯಾದ ಎರಡನೇ ಹಿಂದೂ. ಇವರಿಗಿಂತ ಮುಂಚೆ ಸೇಠ್ ಭರ್ತಾ ರಾಮ್ 1997ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ರಮೇಶ್ ಸಿಂಗ್ ಅರೋರಾ ಮೊದಲ ಬಾರಿಗೆ ಪಂಜಾಬ್ ಅಸೆಂಬ್ಲಿಗೆ ಪ್ರವೇಶ ಮಾಡಿದ ಸಿಖ್ ಸಮುದಾಯದವರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.