ಸಚಿವರ ಹೇಳಿಕೆಗೆ ಪ್ರತಿಪಕ್ಷಗಳ ಆಕ್ರೋಶ

7

ಸಚಿವರ ಹೇಳಿಕೆಗೆ ಪ್ರತಿಪಕ್ಷಗಳ ಆಕ್ರೋಶ

Published:
Updated:

ಲಖನೌ (ಪಿಟಿಐ): ಮುಜಫ್ಫರ್‌ನಗರ ಗಲಭೆ ಸಂತ್ರಸ್ತರ ಶಿಬಿರಗಳಲ್ಲಿ ಜನರ ಮರಣದ ಬಗ್ಗೆ ಉತ್ತರ ಪ್ರದೇಶ ಸಚಿವ ನಾರದ್‌ ರೇ ನೀಡಿದ ಹೇಳಿಕೆಗೆ ಬಿಜೆಪಿ, ಕಾಂಗ್ರೆಸ್‌ ಸೇರಿದಂತೆ ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ‘ಮಕ್ಕಳು, ವಯಸ್ಕರು ಮತ್ತು ವೃದ್ಧರು ಸಾಯುವುದನ್ನು ತಪ್ಪಿಸ­ಲಾಗದು.

ಶಿಬಿರದಲ್ಲಿ ಇರುವವರು ಮಾತ್ರ ಸಾಯುವುದಿಲ್ಲ, ಅರಮನೆ­ಯಲ್ಲಿ ವಾಸಿಸುವವರೂ ಸಾಯು­ತ್ತಾರೆ. ನಮ್ಮ ಮನೆಗಳ­ಲ್ಲಿಯೂ ಮಕ್ಕಳು ಸಾಯುತ್ತಾರೆ. ಎಲ್ಲೆಡೆಯೂ ಜನ ಸಾಯುತ್ತಾರೆ’ ಎಂದು ರೇ ಹೇಳಿದ್ದರು. ಸಮಾಜವಾದಿ ಪಕ್ಷದ ಸರ್ಕಾರ ಜನರ ಕಷ್ಟಗಳ ಬಗ್ಗೆ ಕಿವುಡಾಗಿದೆ ಎಂದು ಟೀಕಿಸಿರುವ ಪ್ರತಿಪಕ್ಷಗಳು ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry