ಬುಧವಾರ, ಜೂನ್ 16, 2021
21 °C

ಸಚಿವೆ, ಸಂಸದರ ಸಮ್ಮುಖದಲ್ಲೇ ಗ್ರಾ.ಪಂ ಸದಸ್ಯರ ಜಟಾಪಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್‌: ಪಿಕೆ.ಪಿ.ಎಸ್‌ ಸಾಲ ಮರುಪಾವತಿ ಕುರಿತು ಸಾಲಗಾರರಿಗೆ ನೀಡಲಾದ ನೋಟೀಸ್‌ ಪತ್ರಕ್ಕೆ ಸಂಬಂಧಿಸಿದ ವಿವಾದ ವಿಷಯ ತಾಲ್ಲೂಕಿನ ಘಾಟಬೋರಾಳ ಗ್ರಾಮಕ್ಕೆ ಬೆಳೆಹಾನಿ ವೀಕ್ಷಿಸಲು ಬಂದ ಸಂಸದ ಎನ್‌.ಧರ್ಮಸಿಂಗ್‌, ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ, ಶಾಸಕ ರಾಜಶೇಖರ ಬಿ.ಪಾಟೀಲ ಅವರ ಸಮ್ಮುಖದಲ್ಲಿ ಭಾರೀ ವಾಗ್ವಾದಕ್ಕೆ ಕಾರಣವಾಯಿತು.ಸಂಸದರಾಗಿ 5ವರ್ಷ ಯಾರಿಗೆ ಏನು ಮಾಡಿದ್ದೀರಿ? ಆತ್ಮೀಯರಾದ ವ್ಯಕ್ತಿಗಳಿಗೆ ಮಾತ್ರ ಲಕ್ಷಾಂತರ ರೂಪಾಯಿ ಅನುದಾನ ನೀಡಿದ್ದೀರಿ. ಗ್ರಾಮದ ಒಟ್ಟಾರೆ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಪಾಟೀಲ ಅವರ ಸಹೋದರ ಬಾಳು ಪಾಟೀಲ ಸಂಸದ ಧರ್ಮಸಿಂಗ್‌ ಅವರನ್ನು ಪ್ರಶ್ನಿಸಿದರು. ಪಿಕೆಪಿಎಸ್‌ ಅಧ್ಯಕ್ಷರು ಸಾಲ ಮರುಪಾವತಿ ಕುರಿತ ನೋಟೀಸ್‌ ಪತ್ರ ನೀಡುವಲ್ಲಿ ತಾರತಮ್ಯ ಧೋರಣೆ ಅನುಸರಿಸಿದ್ದಾರೆ ಎಂದರು. ‘ತಾರತಮ್ಯ ಧೋರಣೆ ಅನುಸರಿಸಿಲ್ಲ. ಸಾಲ ಪಡೆದ ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ನೊಟೀಸ್‌ ನೀಡಲಾಗಿದೆ ಎಂದು ಪಿ.ಕೆ.ಪಿ.ಎಸ್‌ ಅಧ್ಯಕ್ಷ ಶಿವಾಜಿ­ರಾವ ಪ್ರತಿಕ್ರಿಯಿಸಿದರು. ಜೊತೆಗೆ ಶೂನ್ಯ ಬಡ್ಡಿ ದರದಲ್ಲಿ ನೀಡಲಾದ ₨3ಲಕ್ಷ ಕೃಷಿ ಸಾಲ ವಿತರಣೆಯಲ್ಲೂ ಅನ್ಯಾಯ ನಡೆಸ­ಲಾಗಿದೆ ಎಂಬ ವಿಷಯ ಭಾರಿ ವಿವಾದಕ್ಕೆ ಕಾರಣವಾಯಿತು.ಆಗ ಮಧ್ಯೆ ಪ್ರವೇಶಿಸಿದ ಶಾಸಕ ರಾಜಶೇಖರ ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರಿ, ಸಂಸದ ಧರ್ಮಸಿಂಗ್‌ ಬೆಳೆಹಾನಿ ಪರಿಶೀಲನೆ ಸಂಬಂಧ ಸಮಸ್ಯೆಗಳಿದ್ದರೇ ಹೇಳಿ. ವಿನಾಕಾರಣ ಗ್ರಾಮದಲ್ಲಿ ಅಶಾಂತಿ ಕದಡಿಸುವ ಹುನ್ನಾರೆ ನಡೆಸುವವರ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದರು.ಶಾಸಕ ಪಾಟೀಲ ವಿನಾಕಾರಣ ಆರೋಪ ಮಾಡುವುದು ಸಲ್ಲ ಎನ್ನುವ ಮೂಲಕ ಪರಿಸ್ಥಿತಿ ತಿಳಿಗೊಳಿಸಿದರು. ವಾಗ್ವಾದ ಹಿನ್ನೆಲೆಯಲ್ಲಿ ಪ್ರಾಂಗಣದಲ್ಲಿ ಕುರ್ಚಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.