ಬುಧವಾರ, ಜೂನ್ 16, 2021
27 °C

ಸಚಿವ ಅಶೋಕ ತಟಸ್ಥ ನಿಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಲ ದಿನಗಳಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ನಿಕಟವಾಗಿದ್ದ ಗೃಹ ಸಚಿವ ಆರ್.ಅಶೋಕ ಅವರು ರೆಸಾರ್ಟ್ ರಾಜಕಾರಣಕ್ಕೆ ಕೈಜೋಡಿಸಲು ನಿರಾಕರಿಸಿದ್ದಾರೆ.ಅಶೋಕ ಅವರು ಭಾನುವಾರ ಮಡಿಕೇರಿಗೆ ತೆರಳಿದ್ದರು. ರಾತ್ರಿ ನಗರಕ್ಕೆ ವಾಪಸಾದರು. ಈ ಸಂದರ್ಭದಲ್ಲಿ ರೆಸಾರ್ಟ್‌ನಲ್ಲಿದ್ದ ಯಡಿಯೂರಪ್ಪ ಬೆಂಬಲಿಗರು ಗೃಹ ಸಚಿವರನ್ನು ಸಂಪರ್ಕಿಸಿ, ಅಲ್ಲಿಗೆ ಬರುವಂತೆ ಮನವಿ ಮಾಡಿದರು.

 

ಆದರೆ, ತಾವು ರೆಸಾರ್ಟ್ ರಾಜಕಾರಣವನ್ನು ಮೊದಲಿನಿಂದಲೂ ವಿರೋಧಿಸಿಕೊಂಡು ಬಂದಿದ್ದು, ಈಗಲೂ ಅದೇ ನಿಲುವು ತಾಳಿರುವುದಾಗಿ ಅಶೋಕ ಉತ್ತರಿಸಿದ್ದಾರೆ. ಪಕ್ಷದೊಳಗಿನ ರಾಜಕೀಯಕ್ಕೆ ಸಂಬಂಧಿಸಿದಂತೆ ಸದ್ಯ ತಟಸ್ಥ ನಿಲುವು ಹೊಂದಿರುವುದಾಗಿಯೂ ಅವರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.