ಗುರುವಾರ , ಜೂನ್ 24, 2021
25 °C

ಸಚಿವ ಕಮಲ್‌ನಾಥ್ ವಿರುದ್ಧದ ಅರ್ಜಿ ವಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಭಾರತದ ನಗರಾಭಿವೃದ್ಧಿ ಸಚಿವ ಕಮಲ್‌ನಾಥ್ ಅವರು 1984ರಲ್ಲಿ ನಡೆದ ಸಿಖ್ ವಿರೋಧಿ ಗಲಭೆಯಲ್ಲಿ ಭಾಗಿಯಾಗಿದ್ದರು ಎಂದು ದೂರಿ ಅಮೆರಿಕ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ನ್ಯಾಯಾಧೀಶರು ವಜಾಗೊಳಿಸಿದ್ದಾರೆ.ಭಾರತದ ಮುಖಂಡರೊಬ್ಬರ ವಿರುದ್ಧ ತನಿಖೆ ನಡೆಸುವ ಅಧಿಕಾರ ವ್ಯಾಪ್ತಿ ನ್ಯಾಯಾಲಯಕ್ಕೆ ಇಲ್ಲ ಎನ್ನುವ ಕಾರಣದ ಮೇಲೆ ಅರ್ಜಿ ವಜಾ ಮಾಡಲಾಗಿದೆ. ನ್ಯೂಯಾರ್ಕ್ `ಸಿಖ್ ಫಾರ್ ಜಸ್ಟೀಸ್~ ವೇದಿಕೆ ವತಿಯಿಂದ ಕಮಲ್‌ನಾಥ್ ವಿರುದ್ಧ 2010ರ ಏಪ್ರಿಲ್‌ನಲ್ಲಿ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಅಲ್ಲದೇ ಆ ದೂರಿಗೆ ಪೂರಕವಾಗಿ ತಿದ್ದುಪಡಿ ದೂರನ್ನು ಈ ವರ್ಷದ ಆರಂಭದಲ್ಲಿ ದಾಖಲು ಮಾಡಲಾಗಿತ್ತು.ಕಮಲ್‌ನಾಥ್ ಅವರು ಸಿಖ್ ವಿರೋಧಿ ಗಲಭೆ ನಿರತರಿಗೆ ನೆರವು ನೀಡಿದ್ದಲ್ಲದೇ ಪ್ರಚೋದನೆಯನ್ನೂ ನೀಡಿದ್ದರು ಎನ್ನುವುದು ವೇದಿಕೆಯ ಆರೋಪವಾಗಿತ್ತು. ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ದೇಶಾದ್ಯಂತ ಸಿಖ್ಖರ ವಿರುದ್ಧ ಗಲಭೆ ನಡೆದಿತ್ತು.

 

ನ್ಯೂಯಾರ್ಕ್‌ನ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ರಾಬರ್ಟ್ ಸ್ವೀಟ್, 22 ಪುಟಗಳ ಅರ್ಜಿ ವಜಾ ಆದೇಶದಲ್ಲಿ `ಅರ್ಜಿಯನ್ನು ವಜಾ ಮಾಡಲಾಗಿದೆ. ಭಾರತದ ಮುಖಂಡರ ವಿರುದ್ಧ ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ನ್ಯಾಯಾಲಯಕ್ಕೆ ಇಲ್ಲ~ ಎಂದು ಸ್ಪಷ್ಟಪಡಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.