ಶುಕ್ರವಾರ, ಏಪ್ರಿಲ್ 16, 2021
21 °C

ಸಚಿವ ಖರ್ಗೆ ಮನೆ ಎದುರು ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಹೈದರಾಬಾದ್ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿಸುವ ಸಂವಿಧಾನದ 371ನೇ ಕಲಂ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಒತ್ತಾಯಿಸಿ  ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಗುಲ್ಬರ್ಗದ ನಿವಾಸದ ಎದುರು ಕರ್ನಾಟಕ ದಲಿತ ಸರ್ವೋದಯ ಸಮಿತಿ ವತಿಯಿಂದ ಹೈದರಾಬಾದ್ ಕರ್ನಾಟಕ ಪ್ರದೇಶದ ಹೋರಾಟಗಳ ಸಮನ್ವಯ ಸಮಿತಿ ಸದಸ್ಯರು ಸೋಮವಾರ ಭಜನೆ ಮೂಲಕ ಧರಣಿ ನಡೆಸಿದರು.ಪಕ್ಷಾತೀತವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ 371ನೇ ಕಲಂ ಜಾರಿಗೆ ಸ್ಪಂದಿಸಿರುವುದು ಸ್ವಾಗತರ್ಹವಾಗಿದೆ. ಮಳೆಗಾಲದ ಅಧಿವೇಶನದಲ್ಲಿ ಸಂವಿಧಾನದ 371ನೇ ಕಲಂ ಮಂಡಿಸುವಂತೆ ಸಚಿವ ಖರ್ಗೆ ಅವರು ಕೇಂದ್ರಕ್ಕೆ ವಿಶೇಷ ಮನವಿ ಮಾಡಿಕೊಳ್ಳಬೇಕು ಎಂದು ಕೋರಲಾಯಿತು.ಕೇಂದ್ರ ಸರ್ಕಾರ ಈ ಭಾಗದ ಬಹುದಿನಗಳ ಬೇಡಿಕೆಯಾದ 371ನೇ ಕಲಂ ಜಾರಿಗೆ ಇನ್ನೂ ಸಂಪುಟದಲ್ಲಿ ಅನುಮೋದನೆ ನೀಡಿಲ್ಲ. ಆದ್ದರಿಂದ ಬರುವ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆ ಕಡಿಮೆ ಇರುವುದರಿಂದ ರಾಜ್ಯದ ಶಾಸಕರು ಹಾಗೂ ಸಚಿವರು ಕೇಂದ್ರದ ಮೇಲೆ ಒತ್ತಡ ತರಬೇಕು.

 

ಮುಖಂಡರ ಆಶ್ವಾಸನೆಗಳನ್ನು ನಂಬಿಕೊಂಡು ಈ ಭಾಗದ ಜನರು ಪ್ರತಭಟನೆ ಕೈಬಿಟ್ಟಿದ್ದಾರೆ. ಚಳಿಗಾಲ-ಮಳೆಗಾಲ ಎಂದು ವಿಶೇಷ ಸ್ಥಾನಮಾನದ ವಿಷಯ ಮಂಡನೆಯನ್ನು ಕೇಂದ್ರ ಸರ್ಕಾರ ಮುಂದೂಡಿತ್ತಿರುವ ಕ್ರಮ ಸರಿಯಗಿಲ್ಲ ಎಂದು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.ವಿ.ಎಚ್. ವಾಲಿಕಾರ, ಲಕ್ಷ್ಮಣ ದಸ್ತಿ, ತಾಹೇರ ಹುಸೇನ, ಕಲ್ಯಾಣರಾವ ಪಾಟೀಲ, ನಾಗಲಿಂಗಯ್ಯ ಮಠಪತಿ, ಮಂಜುನಾಥ ನಾಲವಾರಕರ, ತಿಪ್ಪಣ್ಣ ಲಂಡನಕರ್, ಸಚಿನ ಫರತಾಬಾದ, ಆನಂದ ಮಠಪತಿ, ಮನೋಹರ ಬಿರನೂರ ಮತ್ತಿತರರು ಧರಣಿಯಲ್ಲಿ ಭಾಗವಹಿಸಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.