ಸಚಿವ ಜೈಸ್ವಾಲ್ ವಿರುದ್ಧ ದೂರು

7

ಸಚಿವ ಜೈಸ್ವಾಲ್ ವಿರುದ್ಧ ದೂರು

Published:
Updated:
ಸಚಿವ ಜೈಸ್ವಾಲ್ ವಿರುದ್ಧ ದೂರು

ಕಾನ್ಪುರ (ಪಿಟಿಐ): ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಕ್ಕಾಗಿ ಕೇಂದ್ರ ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರ ವಿರುದ್ಧ ಅಪರಾಧ ಪ್ರಕರಣ ದಾಖಲಿಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಬುಧವಾರ ಸ್ಥಳೀಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.`ವರ್ಷಗಳು ಉರುಳಿದಂತೆ ಮಹಿಳೆಯರು ಆಕರ್ಷಣೆ ಕಳೆದುಕೊಳ್ಳುತ್ತಾರೆ~ ಎಂದು ಸಚಿವರು ಭಾನುವಾರ ರಾತ್ರಿ ಕವಿ ಸಮ್ಮೇಳನದಲ್ಲಿ ನೀಡಿದ್ದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ.

 

ಅರ್ಜಿ ಸಲ್ಲಿಸಿರುವ ಅನಿತಾ ದುವಾ ಅವರಿಂದ ಇದೇ 8ರಂದು ಹೇಳಿಕೆ ದಾಖಲಿಸಿಕೊಳ್ಳುವಂತೆಮುಖ್ಯ ಮೆಟ್ರೋಪಾಲಿಟನ್ ನ್ಯಾಯಾಧೀಶ ವಿ.ಕೆ.ಪಾಂಡೆ ಆದೇಶ ನೀಡಿದ್ದಾರೆ.`ಸಚಿವರು ತಮ್ಮ ಸ್ಥಾನದ ಘನತೆಗೆ ತಕ್ಕುದಲ್ಲದ ಹೇಳಿಕೆ ನೀಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ~ ಎಂದು ದುವಾ ಅರ್ಜಿಯಲ್ಲಿ ದೂರಿದ್ದಾರೆ.ತಮ್ಮ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವರು ನಂತರದಲ್ಲಿ ಕ್ಷಮಾಪಣೆ ಕೇಳಿದ್ದರು. `ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಒಂದು ವೇಳೆ ನನ್ನ ಮಾತಿನಿಂದ ಮಹಿಳೆಯರ ಭಾವನೆಗೆ ಧಕ್ಕೆಯಾದರೆ ಕ್ಷಮೆ ಕೇಳುತ್ತೇನೆ~ ಎಂದು ಹೇಳಿದ್ದರು.

ಜೈಸ್ವಾಲ್ ಹೇಳಿದ್ದೇನು...?
ಸಚಿವರು ಕವಿ ಸಮ್ಮೇಳನದಲ್ಲಿ ಮಾತನಾಡುತ್ತ್ದ್ದಿದಾಗ ಶ್ರೀಲಂಕಾದಲ್ಲಿ ನಡೆದ ಟ್ವೆಂಟಿ-20 ಪಂದ್ಯದಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಜಯಭೇರಿ ಬಾರಿಸಿದ ಸುದ್ದಿ ಬಂತು. ಆಗ ಅವರು, `ಹಳೆಯ ಗೆಲುವಿನಂತೆಯೇ ಪತ್ನಿಯರು ಸಹ ಕಾಲ ಕ್ರಮೇಣ ಆಕರ್ಷಣೆ ಕಳೆದುಕೊಳ್ಳುತ್ತಾರೆ~ ಎಂದಿದ್ದರು.`ಹೊಸ ಗೆಲುವಿನಂತೆಯೇ ಮದುವೆಯಾದ ಹೊಸದರಲ್ಲಿ ಸಂಭ್ರಮವಿರುತ್ತದೆ. ಆದರೆ ವರ್ಷ ಉರುಳಿದಂತೆ ಪತ್ನಿಯರು ಆಕರ್ಷಣೆ ಕಳೆದುಕೊಳ್ಳುತ್ತಾರೆ~ ಎಂದೂ ಹೇಳಿದ್ದರು.ತಪ್ಪು ಹೇಳಿಕೆ

`ಜೈಸ್ವಾಲ್ ಅವರು ತಪ್ಪು ಹೇಳಿಕೆ ನೀಡಿದ್ದಾರೆ. ಮಹಿಳೆಯನ್ನು ಗೆಲುವಿಗೆ ಹೋಲಿಸುವುದು ಸರಿಯಲ್ಲ. ಮದುವೆಯಾಗಿ ಹಲವು ವರ್ಷಗಳು ಕಳೆದಂತೆ ಸಂಗಾತಿಗಳ ನಡುವಿನ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ಸಚಿವರು ಬಳಸಿರುವ ಭಾಷೆ ಸರಿ ಇಲ್ಲ. ಅದಕ್ಕಾಗಿ ಅವರು ಕ್ಷಮೆ ಕೇಳಬೇಕು~ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮ ಹೇಳಿದ್ದಾರೆ.ಈ ಸಂಬಂಧ ನಾವು ಪ್ರಧಾನಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆಯುತ್ತೇವೆ ಎಂದೂ ಅವರು ತಿಳಿಸಿದ್ದಾರೆ.
ಹೇಳಿಕೆ ಖಂಡಿಸಿ ಕಾನ್ಪುರದಲ್ಲಿ ಹಲವು ಮಹಿಳಾ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತೆಯರು ಜೈಸ್ವಾಲ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದ್ದರು.ರಾಜೀನಾಮೆಗೆ ಒತ್ತಾಯ: ವಿವಾದಿತ ಹೇಳಿಕೆ ನೀಡಿರುವ ಜೈಸ್ವಾಲ್ ರಾಜೀನಾಮೆ ನೀಡಬೇಕೆಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಶಾಂತಾ ಕುಮಾರ್ ಆಗ್ರಹಿಸಿದ್ದಾರೆ. ಮಹಿಳೆಯನ್ನು ದೇವತಾ ಸ್ವರೂಪಿಯಾಗಿ ನೋಡುವ ದೇಶದಲ್ಲಿ ಸಚಿವರು ಆಕೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry