ಬುಧವಾರ, ನವೆಂಬರ್ 20, 2019
20 °C

ಸಚಿವ ತರೂರ್ ಖುಲಾಸೆ

Published:
Updated:

ಕೊಚ್ಚಿ (ಪಿಟಿಐ): ರಾಷ್ಟ್ರಗೀತೆಗೆ ಅಪಮಾನ ಮಾಡಿದ ಪ್ರಕರಣದಿಂದ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಶಶಿ ತರೂರ್ ಅವರನ್ನು ಖುಲಾಸೆಗೊಳಿಸಿ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಶನಿವಾರ ಆದೇಶ ನೀಡಿದೆ.ಅಮೆರಿಕದ ಪ್ರಜೆಗಳಂತೆ ಎದೆಯ ಎಡಭಾಗದ ಮೇಲೆ ಬಲ ಕೈ ಇಟ್ಟು ರಾಷ್ಟ್ರಗೀತೆ ಹಾಡಬೇಕು ಹೊರತು ನೇರವಾಗಿ ನಿಂತುಕೊಂಡು ಬೇಡ ಎಂದು ತರೂರ್ ಅವರು ಡಿಸೆಂಬರ್ 16, 2008ರಲ್ಲಿ ಕೊಚ್ಚಿಯ ಫೆಡರಲ್ ಬ್ಯಾಂಕ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆಗೆ ಅಡ್ಡಿಪಡಿಸಿ ಅಪಮಾನ ಮಾಡಿದ್ದಾರೆ. ಆದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಜಾಯ್ ಕೈಥರಥ್ ಎಂಬುವವರು ದೂರು ಸಲ್ಲಿಸಿದ್ದರು.`ತರೂರ್ ಅವರು ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆ ಅಡ್ಡಿಪಡಿಸಿಲ್ಲ ಎನ್ನುವುದು ಮನವರಿಕೆಯಾಗಿದೆ. ಆದ್ದರಿಂದ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಲು ನಿರ್ಧರಿಸಲಾಗಿದೆ' ಎಂದು ಹೆಚ್ಚುವರಿ ಮುಖ್ಯ ಪ್ರಧಾನ ಮ್ಯಾಜಿಸ್ಟ್ರೇಟ್ ಎಂ. ಮನೋಜ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)