ಭಾನುವಾರ, ಜೂನ್ 20, 2021
21 °C

ಸಚಿವ ದೇಶಪಾಂಡೆ ವಿರುದ್ಧ ದೂರು: ಅರ್ಜಿ ವಿಚಾರಣೆ 15ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಸರ್ಕಾರಿ ಜಮೀನನ್ನು ಅಕ್ರಮವಾಗಿ ತಮ್ಮ ಟ್ರಸ್ಟ್‌ ಹೆಸರಿಗೆ ಪಡೆದು­ಕೊಂಡಿದ್ದಾರೆ ಎಂದು ಆರೋಪಿಸಿ ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಹಾಗೂ ಅವರ ಕುಟುಂಬದ ವಿರುದ್ಧ ಆರ್‌ಟಿಐ ಕಾರ್ಯಕರ್ತ ಜಯಂತ ತಿನೇಕರ್‌ ಸಲ್ಲಿಸಿದ ದೂರಿನ ಅರ್ಜಿಯ ವಿಚಾರಣೆಯನ್ನು ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಇದೇ 15ಕ್ಕೆ ಮುಂದೂಡಿದೆ.ಕೈಗಾರಿಕೆ ಉದ್ದೇಶಕ್ಕಾಗಿ ಹಳಿಯಾಳದ ಹುಲ್ಲಟ್ಟಿ ಗ್ರಾಮದಲ್ಲಿ ಮೀಸಲಿಟ್ಟಿದ್ದ 34.12 ಎಕರೆ ಜಮೀನಿನಲ್ಲಿ 9.20 ಎಕರೆ ಜಮೀನನ್ನು ಅಕ್ರಮವಾಗಿ ತಮ್ಮ ಟ್ರಸ್ಟ್‌ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿ ತಿನೇಕರ ಅವರು ಮಾ. 10 ರಂದು ದೇಶಪಾಂಡೆ ಕುಟುಂಬದ ವಿರುದ್ಧ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಆದರೆ, ದೂರು ದಾಖಲಿಸಿಕೊಳ್ಳದ ನ್ಯಾಯಾಧೀಶರು ಅರ್ಜಿಯ ವಿಚಾರಣೆಯನ್ನು 12ಕ್ಕೆ ಮುಂದೂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.