ಸಚಿವ ಪಾಟೀಲ ಪ್ರವಾಸ ನಾಳೆ

7

ಸಚಿವ ಪಾಟೀಲ ಪ್ರವಾಸ ನಾಳೆ

Published:
Updated:

ವಿಜಾಪುರ: ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಇದೇ 4 ರಂದು ಬಬಲೇಶ್ವರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಬೆಳಿಗ್ಗೆ 10ಕ್ಕೆ ಬಬಲಾದ ಗ್ರಾಮದಲ್ಲಿ ಬಬಲಾದ-–ಶಿರಬೂರ (₨40 ಲಕ್ಷ ವೆಚ್ಚದ ಕಾಮಗಾರಿ) ರಸ್ತೆ ಕಾಮಗಾರಿಗೆ ಭೂಮಿ ಪೂಜೆ, 11ಕ್ಕೆ ₨15.75 ಕೋಟಿ ವೆಚ್ಚದ ಬಬಲೇಶ್ವರ-–ಚಿಕ್ಕಗಲಗಲಿ ಮುಖ್ಯರಸ್ತೆ ಅಭಿವೃದ್ಧಿ ಕಾಮಗಾರಿಗೆ ನಂದಿ ಸಕ್ಕರೆ ಕಾರ್ಖಾನೆಯ ಮುಂಭಾಗದಲ್ಲಿ ಭೂಮಿಪೂಜೆ ನೆರವೇರಿಸುವರು.ಮಧ್ಯಾಹ್ನ 1ಕ್ಕೆ ದೇವರ ಗೆಣ್ಣೂರ–-ಸುತಗುಂಡಿ, ದೇವರಗೆಣ್ಣೂರ ಪುನರ್ವಸತಿ ಕೇಂದ್ರದ ಒಳರಸ್ತೆ ಅಭಿವೃದ್ಧಿ ಹಾಗೂ ಸರ್ಕಾರಿ ಪ್ರೌಢ ಶಾಲೆಯ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸುವರು. 2ಕ್ಕೆ ಲಿಂಗದಳ್ಳಿ ಆರ್.ಸಿ., ತಾಜಪುರ -ಆರ್.ಸಿ.ಗಳಲ್ಲಿ ರಸ್ತೆ ಕಾಮಗಾರಿ. ಮಧ್ಯಾಹ್ನ 3ಕ್ಕೆ ಜೈನಾಪುರ ಆರ್.ಸಿ.ಯಲ್ಲಿ ₨60 ಲಕ್ಷ ವೆಚ್ಚದ ಬಿಸಿಎಂ ಹಾಸ್ಟೆಲ್ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸುವರು ಎಂದು ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry