ಸಚಿವ ಮುರುಗೇಶ್ ನಿರಾಣಿ ಹಗರಣ ಶೀಘ್ರ ಬಹಿರಂಗ
ಧಾರವಾಡ: `ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಎಷ್ಟು ವರ್ಷ ಜೈಲು ಶಿಕ್ಷೆಯಾದರೂ ಸಾಲದು. ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಅವರು ನಡೆಸಿದ ಹಗರಣವನ್ನು ಸದ್ಯದಲ್ಲಿಯೇ ಬಹಿರಂಗಪಡಿಸಲಾಗುವುದು~ ಎಂದು ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.
ನಗರದಲ್ಲಿ ಬುಧವಾರ `ಸೆಂಟರ್ ಫಾರ್ ಡೆವಲಪ್ಮೆಂಟ್ ಸ್ಟಡೀಸ್~ ಸಂಸ್ಥೆಯು ಆಯೋಜಿಸಿದ್ದ `ಗಣಿಗಾರಿಕೆ ಮತ್ತು ಅಭಿವೃದ್ಧಿ~ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇನ್ನೂ ಅನೇಕರು ನಡೆಸಿದ ಹಗರಣಗಳ ದಾಖಲೆ ಪತ್ರಗಳು ಕಣ್ಮರೆಯಾಗಿವೆ. ಅದರಲ್ಲೂ ಪೊಲೀಸ್ ಠಾಣೆಯಲ್ಲಿಯೇ ಈ ದಾಖಲೆಗಳು ಮಾಯವಾಗಿವೆ ಎಂದು ಅವರು ಆಪಾದಿಸಿದರು.
`ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಿಂದಲೂ ಅಧಿಕಾರ ದುರುಪಯೋಗವಾಗಿದೆ. ಕಳೆದ ದಶಕದಲ್ಲಿ ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಅಧಿಕಾರ ದುರುಪಯೋಗವಾಗಿದೆ. ಇದು ಪರಾಕಾಷ್ಠೆಗೆ ಹೋಗಿದ್ದು ಯಡಿಯೂರಪ್ಪ ಕಾಲದಲ್ಲಿ. ಇಂದು ಅಧಿಕಾರ ಬಹಳ ದುರುಪಯೋಗವಾಗುತ್ತಿದ್ದು, ಇದನ್ನು ನಾವೆಂದೂ ಸಹಿಸಬಾರದು~ ಎಂದರು.
`ಎಸ್.ಎಂ.ಕೃಷ್ಣ ಹಾಗೂ ಡಿ.ಕೆ.ಶಿವಕುಮಾರ ಅವರ ಅಧಿಕಾರಾವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಯ ಕುರಿತು ತೀವ್ರವಾದ ಶೋಧ ನಡೆದಿದ್ದು, ಆಗಸ್ಟ್ 2ರಂದು ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಲಾಗುವುದು~ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.