ಸಚಿವ ಸ್ಥಾನಕ್ಕೆ ಕತ್ತಿ ಅನರ್ಹ: ಪಾಪು

7

ಸಚಿವ ಸ್ಥಾನಕ್ಕೆ ಕತ್ತಿ ಅನರ್ಹ: ಪಾಪು

Published:
Updated:

ಬೆಂಗಳೂರು:  `ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಬೇಕು ಎಂಬ ಅನರ್ಥಕಾರಿ ಹೇಳಿಕೆ ನೀಡಿರುವ ಸಚಿವ ಉಮೇಶ ಕತ್ತಿ ಆ ಸ್ಥಾನದಲ್ಲಿ ಕೂಡಲು ಅರ್ಹರಲ್ಲ~ ಎಂದು ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಆಕ್ರೋಶದಿಂದ ಹೇಳಿದರು.ನಗರದಲ್ಲಿ ಶನಿವಾರ ನಡೆದ `ನಮ್ಮ ಮೆಟ್ರೊ~ ರೈಲು ಸಂಚಾರದ ಮೊದಲ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು ವರದಿಗಾರರ ಜೊತೆ ಮಾತನಾಡಿದರು.`ಬೆಳಗಾವಿಯಲ್ಲಿ ಸುವರ್ಣ ಸೌಧ ಕಟ್ಟಿರುವುದು ರಾಜ್ಯವನ್ನು ಒಡೆಯಲು ಅಲ್ಲ. ಅದನ್ನು ಕಟ್ಟಲು ಬಳಸಿದ ದುಡ್ಡು ಅಖಂಡ ಕರ್ನಾಟಕದ ಜನರಿಗೆ ಸೇರಿದ್ದು. ಬಾಯಿಗೆ ಬಂದಂತೆ ಕಿರುಚುವ ಕತ್ತಿ ಇದನ್ನು ಅರ್ಥ ಮಾಡಿಕೊಳ್ಳಬೇಕು~ ಎನ್ನುವಾಗ ಅವರ ಮುಖದಲ್ಲಿ ಸಿಟ್ಟು ಎದ್ದು ಕಾಣುತ್ತಿತ್ತು. `ಇಂತಹ ಒಣ ಕಾರುಬಾರು ಮಾಡದೆ ಸುಮ್ಮನಿದ್ದರೆ ಕತ್ತಿಗೆ ಒಳಿತು. ಯಾವುದೇ ಕಾರಣಕ್ಕೂ ರಾಜ್ಯವನ್ನು ಒಡೆಯುವ ಮಾತಿಗೆ ಅವಕಾಶ ಇಲ್ಲ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry