ಸಚ್ಚಿದಾನಂದ ಜ್ಞಾನೇಶ್ವರ ಶ್ರೀಗೆ ಸ್ವಾಗತ

7

ಸಚ್ಚಿದಾನಂದ ಜ್ಞಾನೇಶ್ವರ ಶ್ರೀಗೆ ಸ್ವಾಗತ

Published:
Updated:

ಶಿವಮೊಗ್ಗ: ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪದಲ್ಲಿ ಸೋಮವಾರ ಶ್ರೀಕ್ಷೇತ್ರ ಕರ್ಕಿ ಜ್ಞಾನೇಶ್ವರಿ ಮಠ ಸಂಸ್ಥಾಪಕ ಹಾಗೂ ದೈವಜ್ಞ ಧರ್ಮ ಪೀಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಅವರನ್ನು ಸ್ವಾಗತಿಸಲಾಯಿತು.ದೈವಜ್ಞ ಬ್ರಾಹ್ಮಣರ ಸಂಘದಲ್ಲಿ ನಗರದ ಗಣಪತಿ ದೇವಸ್ಥಾನದಿಂದ ಜ್ಞಾನೇಶ್ವರಿ ದೇವಿಯ ರಥದಲ್ಲಿ ಪೂರ್ಣ ಕುಂಭ, ಕಳಸದ ಮೆರವಣಿಗೆ ಮುಖಾಂತರ ಸ್ವಾಮೀಜಿ ಅವರನ್ನು ಬರ ಮಾಡಿಕೊಳ್ಳಲಾಯಿತು.ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಚ್.ಎಂ. ಚಂದ್ರಶೇಖರ್, ಸದಸ್ಯರು, ಪಿ.ವಿ. ಜನ್ನು, ಶೋಭಾ ದಿವಾಕರ್ ಮತ್ತಿತರರು ಉಪಸ್ಥಿತರಿದ್ದರು. ಜೈನ ಮಂದಿರದ ಸಭಾ ಭವನದಲ್ಲಿ ಪಾದಪೂಜೆಯೊಂದಿಗೆ ಸ್ವಾಮೀಜಿ ಅವರ ಉಪನ್ಯಾಸ ನಡೆಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry