ಬುಧವಾರ, ನವೆಂಬರ್ 13, 2019
24 °C

`ಸಜಲ': 51,870 ಕುಟುಂಬಗಳಿಗೆ ಜಲಮಂಡಳಿಯಿಂದ ನೀರು ಸಂಪರ್ಕ

Published:
Updated:

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ ಏಳು ನಗರಸಭೆ ಹಾಗೂ ಒಂದು ಪುರಸಭೆಯ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಮಾಡಲು ಕಾವೇರಿ ನಾಲ್ಕನೇ ಹಂತ 2ನೇ ಘಟ್ಟದ ಯೋಜನೆಯಡಿ ಮಾರ್ಚ್ ಅಂತ್ಯದ ವರೆಗೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು 51,870 ಕುಟುಂಬಗಳಿಗೆ ಸಂಪರ್ಕ ನೀಡಿದೆ.ಮಂಡಳಿ 1,11,325 `ಸಜಲ' ಅರ್ಜಿಗಳನ್ನು ವಿತರಿಸಿದೆ. 57,715 ಅರ್ಜಿಗಳು ಸಲ್ಲಿಕೆಯಾಗಿವೆ. ಮಂಡಳಿ ಪರಿಶೀಲನೆ ನಡೆಸಿ 51,870 ಕುಟುಂಬಗಳಿಗೆ ನೀರಿನ ಸಂಪರ್ಕ ಕಲ್ಪಿಸಿದೆ. ಪೂರ್ವ ವಿಭಾಗದಲ್ಲಿ 47,166 ಅರ್ಜಿಗಳ ವಿತರಣೆಯಾಗಿದ್ದು, 17,225 ಕುಟುಂಬಗಳಿಗೆ ಸಂಪರ್ಕ ನೀಡಲಾಗಿದೆ. ಉತ್ತರ ವಿಭಾಗದಲ್ಲಿ 24,101 ಅರ್ಜಿಗಳನ್ನು ವಿತರಿಸಿ 10,709 ಕುಟುಂಬಗಳಿಗೆ ನೀರಿನ ಸಂಪರ್ಕ ಒದಗಿಸಲಾಗಿದೆ.ದಕ್ಷಿಣದಲ್ಲಿ 13,065 ಅರ್ಜಿಗಳನ್ನು ವಿತರಿಸಿ 9,059 ಸಂಪರ್ಕಗಳನ್ನು ಮಂಜೂರು ಮಾಡಲಾಗಿದೆ. ವಾಯುವ್ಯದಲ್ಲಿ 8,687 ಅರ್ಜಿಗಳನ್ನು ವಿತರಿಸಿ 5,629 ಕುಟುಂಬಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ. ಆಗ್ನೇಯದಲ್ಲಿ 2,747 ಅರ್ಜಿಗಳನ್ನು ವಿತರಿಸಿ 987 ಸಂಪರ್ಕಗಳನ್ನು ನೀಡಲಾಗಿದೆ. ಉಳಿದ ಅರ್ಜಿಗಳ ಪರಿಶೀಲನೆ ನಡೆಯುತ್ತಿದೆ ಎಂದು ಜಲಮಂಡಳಿ ಪ್ರಕಟಿಸಿದೆ.142 ಅಕ್ರಮ ನೀರಿನ ಸಂಪರ್ಕ ಕಡಿತ

ಬೆಂಗಳೂರು:
ಕುಡಿಯುವ ನೀರಿನ ಹಾಗೂ ಒಳಚರಂಡಿ ಅಕ್ರಮ ಸಂಪರ್ಕ ಪತ್ತೆಗೆ ಜಲಮಂಡಳಿ ಹಮ್ಮಿಕೊಂಡಿರುವ ಕಾರ್ಯಾಚರಣೆಯ ಭಾಗವಾಗಿ ಬುಧವಾರ ಹಾಗೂ ಗುರುವಾರ 142 ಸಂಪರ್ಕಗಳನ್ನು ಕಡಿತ ಮಾಡಲಾಗಿದೆ. 77 ಮಂದಿಗೆ ನೋಟಿಸ್ ನೀಡಲಾಗಿದ್ದು, 3,86,911 ದಂಡ ವಸೂಲಿ ಮಾಡಲಾಗಿದೆ.

ಎಂ.ಇ.ಐ ಬಡಾವಣೆ, ಕಗ್ಗದಾಸಪುರ, ನಾಗವಾರಪಾಳ್ಯ, ಎಸ್.ಡಿ.ಪಾಳ್ಯ, ಲಕ್ಷ್ಮೀಪುರ, ಇಂದಿರಾನಗರ ಮೊದಲನೇ ಹಂತ, ಎಚ್‌ಎಎಲ್ 2ನೇ ಹಂತ, ಸಂಜಯನಗರ ಸೇವಾಠಾಣೆ ಪ್ರದೇಶ, ಬಿ.ಇ.ಎಲ್ ರಸ್ತೆ, ಕೋಲ್ಸ್ ಪಾರ್ಕ್, ಶಿವಾಜಿನಗರ, ಕೆಂಗುಂಟೆ, ವಿಜಯಾ ಬ್ಯಾಂಕ್ ಬಡಾವಣೆ, ಕತ್ರಿಗುಪ್ಪೆ, ದೇವಗಿರಿ,  ಕೊತ್ತನೂರು ದಿಣ್ಣೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)