ಸಟಾರೆಂ- ಎಸ್‌ಎ ಇಂಡಿಯಾ ಸಹಭಾಗಿತ್ವ

7

ಸಟಾರೆಂ- ಎಸ್‌ಎ ಇಂಡಿಯಾ ಸಹಭಾಗಿತ್ವ

Published:
Updated:

ಬೆಂಗಳೂರು: ಸ್ವಿಟ್ಜರ್‌ಲೆಂಡ್ ಮೂಲದ ಸಟಾರೆಂ ಎ.ಜಿ ಕಂಪೆನಿಯು ಭಾರತದಲ್ಲಿ ವಾಣಿಜ್ಯ ಬಳಕೆಯ ಗಾಳಿ ವಿದ್ಯುತ್ ಉತ್ಪಾದನೆಗಾಗಿ ಎಸ್‌ಎ ಇಂಡಿಯಾ ಜತೆ ಬುಧವಾರ ಇಲ್ಲಿ ಸಹಭಾಗಿತ್ವ ಪ್ರಕಟಿಸಿದೆ.ಸುಧಾರಿತ ‘ವಿಂಡ್‌ಸ್ಯಾಟ್’ ತಂತ್ರಜ್ಞಾನ ಬಳಸಿ ಪರಿಸರ ಸ್ನೇಹಿ ವಿಧಾನದಲ್ಲಿ ವಿದ್ಯುತ್ ಉತ್ಪಾದಿಸಲಾಗುವುದು. ಸಾಂಪ್ರದಾಯಿಕ ಪವನ ವಿದ್ಯುತ್ ಉತ್ಪಾದನಾ ಘಟಕ್ಕೆ ಹೋಲಿಸಿದರೆ ಇಲ್ಲಿನ ಉತ್ಪಾದನಾ ವೆಚ್ಚ ಶೇ 30ರಷ್ಟು ಅಗ್ಗ. ಶಬ್ದ ಮಾಲಿನ್ಯ ಕಡಿಮೆ.  ವಸತಿ ಸಮುಚ್ಚಯ, ಚಿಕ್ಕ ಪ್ರಮಾಣದ ಕೈಗಾರಿಕಾ ಪ್ರದೇಶಗಳಿಗೆ ‘ವಿಂಡ್‌ಸ್ಯಾಟ್’ ಅಳವಡಿಸಿಕೊಳ್ಳಬಹುದು  ಎಂದು ಸೆಟಾರೆಂ  ಅಧ್ಯಕ್ಷ ಜೆರೋಮ್ ಫ್ರಿಲರ್ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry