ಸಣ್ಣ ಉದ್ಯಮ ಮುಚ್ಚಿಟ್ಟ ದೊಡ್ಡಗಂಟು

7

ಸಣ್ಣ ಉದ್ಯಮ ಮುಚ್ಚಿಟ್ಟ ದೊಡ್ಡಗಂಟು

Published:
Updated:
ಸಣ್ಣ ಉದ್ಯಮ ಮುಚ್ಚಿಟ್ಟ ದೊಡ್ಡಗಂಟು

ನವದೆಹಲಿ(ಪಿಟಿಐ): ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ(ಎಂಎಸ್‌ಎಂಇ)ಗಳು 2010-11ನೇ ಹಣಕಾಸು ವರ್ಷದಲ್ಲಿ ಭಾರಿ ಪ್ರಮಾಣದಲ್ಲಿ ವರಮಾನ ಘೋಷಿಸಿಕೊಳ್ಳದೇ ಮುಚ್ಚಿಟ್ಟಿದ್ದ ಪ್ರಕರಣವೊಂದನ್ನೆ ವರಮಾನ ತೆರಿಗೆ ಇಲಾಖೆ ಪತ್ತೆ ಹಚ್ಚಿದೆ.ರಿಯಲ್ ಎಸ್ಟೇಟ್, ತಯಾರಿಕೆ ಮತ್ತು ಮಾರಾಟ ಕ್ಷೇತ್ರ ಸೇರಿದಂತೆ ಎಂಎಸ್‌ಎಂಇ ಕ್ಷೇತ್ರದ ಹಲವಾರು ಉದ್ದಿಮೆಗಳು ಒಟ್ಟು ರೂ 5894.44 ಕೋಟಿಯಷ್ಟು ವರಮಾನದ ಲೆಕ್ಕವನ್ನೇ ಕೊಟ್ಟಿರಲಿಲ್ಲ. ನಂತರ ತೆರಿಗೆ ಇಲಾಖೆ ಅಧಿಕಾರಿಗಳು ನಿರಂತರವಾಗಿ 3911 ಕಡೆ ದಾಳಿ ನಡೆಸಿ ಲೆಕ್ಕಪತ್ರ ಶೋಧಿಸಿದಾಗ ಇಷ್ಟೊಂದು ಭಾರಿ ಪ್ರಮಾಣದ ತೆರಿಗೆ ವಂಚನೆ ಪ್ರಕರಣ ಬಯಲಿಗೆ ಬಂದಿತು ಎಂದು ವರಮಾನ ತೆರಿಗೆ ಇಲಾಖೆಯ ಪರಿಷ್ಕೃತ ವರದಿ ಗುರುವಾರ ತಿಳಿಸಿದೆ.ದೇಶದಲ್ಲಿ 2.61 ಕೋಟಿ ಎಂಎಸ್‌ಎಂಇಗಳಿದ್ದು, ಒಟ್ಟು 5.97 ಕೋಟಿ ಮಂದಿಗೆ ಉದ್ಯೋಗ ಅವಕಾಶ ಮಾಡಿಕೊಟ್ಟಿವೆ. ಆದರೆ, ಈ ವರಮಾನ ಮುಚ್ಚಿಟ್ಟ ವಂಚನೆಯ ಗಾತ್ರ ದೇಶದ ಉತ್ಪಾದನಾ ಕ್ಷೇತ್ರದ ಒಟ್ಟಾರೆ ಪ್ರಮಾಣದ ಶೇ 45ರಷ್ಟಿದೆ. 2009-10ರಲ್ಲಿಯೂ ಇದೇ ಬಗೆಯಲ್ಲಿ 4680 ಕಡೆ ದಾಳಿ ನಡೆಸಿ ರೂ 4857.10 ಕೋಟಿ ವಂಚನೆ ಪತ್ತೆ ಮಾಡಲಾಗಿತ್ತು ಎಂದು ವರದಿ ವಿವರಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry