ಸಣ್ಣ ಪ್ರಯತ್ನ, ಸಕಾರಾತ್ಮಕ ಪರಿಣಾಮ

7

ಸಣ್ಣ ಪ್ರಯತ್ನ, ಸಕಾರಾತ್ಮಕ ಪರಿಣಾಮ

Published:
Updated:

ದಾವಣಗೆರೆ: ಪರಿಸರ ರಕ್ಷಣೆಗೆ ಬೃಹತ್ ಹೋರಾಟಗಳೇ ಬೇಕಾಗಿಲ್ಲ. ಸಣ್ಣಪುಟ್ಟ ಪ್ರಯತ್ನಗಳೇ ಒಳ್ಳೆಯ ಪರಿಣಾಮ ಬೀರಬಲ್ಲವು ಎಂದು  ಹಾವೇರಿಯ ಪರಿಸರ ವೇದಿಕೆ ಮತ್ತು ನೀಡ್ಸ್ ಸಂಸ್ಥೆಯ ಅಧ್ಯಕ್ಷೆ ಮಾಧುರಿ ಜೆ. ದೇವಧರ್ ಹೇಳಿದರು.ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಪರಿಸರ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜನರ ಸಂಘಟಿತ ಹೋರಾಟದಿಂದ ಪರಿಸರ ಉಳಿಸಬಹುದು ಎಂದು ಅವರು ಉದಾಹರಣೆ ಸಹಿತ ವಿವರಿಸಿದರು.ರಾಜ್ಯದ 5 ಪ್ರಮುಖ ಜಿಲ್ಲೆಗಳಲ್ಲಿ ಸುಮಾರು 75 ಸಾವಿರ ಎಕರೆಯಷ್ಟು ಗೋಮಾಳವನ್ನು ಸರ್ಕಾರ ಬೇರೆ ಬೇರೆ ಉದ್ದೇಶಗಳಿಗೆ ನೀಡಲು ತೀರ್ಮಾನಿಸಿತ್ತು. ಸಂಘಟಿತ ಪ್ರಯತ್ನದಿಂದ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ನಡೆಸಿ ಆ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳುವಂತೆ ಮಾಡಲಾಯಿತು.

 

ಹಾವೇರಿಯಲ್ಲಿ 250 ಎಕರೆ ಹುಲ್ಲುಗಾವಲು ಪ್ರದೇಶ ವನ್ನು ಸರ್ಕಾರ ಇಲಾಖೆಯೊಂದಕ್ಕೆ ನೀಡಲು ತೀರ್ಮಾನಿಸಿತ್ತು. ಅದನ್ನೂ ತಡೆಯಲಾಯಿತು. ಕೆಲವು ಹೋರಾಟಗಳಲ್ಲಿ ಶಾಲಾ ಮಕ್ಕಳೂ ನೇರವಾಗಿ ತೊಡಗಿದ್ದರು ಎಂದು ಸ್ಮರಿಸಿದರು.ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಯೋಜನಾ ಅಭಿವೃದ್ಧಿ ಅಧಿಕಾರಿ ಡಾ.ಎಸ್.ಜೆ. ವಿಕಾಸ್ ಮಾತನಾಡಿ, ಸರ್ಕಾರದ ಯಾವುದೇ ಅನುದಾನ ಜಿಲ್ಲಾ ಪಂಚಾಯ್ತಿ ಮೂಲಕವೇ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಹೋಗುತ್ತದೆ. ಅದಕ್ಕಾಗಿ ಜನ ಪ್ರತಿನಿಧಿಗಳು ಹಿರಿಯ ಅಧಿಕಾರಿಗಳು ಮತ್ತು ಗ್ರಾಮಮಟ್ಟದ ಅಧಿಕಾರಿಗಳಿಗೆ ಪರಿಸರ ನಿರ್ವಹಣೆ ತರಬೇತಿ ನೀಡಲಾಗುತ್ತದೆ. ಈ ಮೂವರೂ ಒಟ್ಟಾಗಿ ತಮ್ಮ ಕಾರ್ಯಕ್ಷೇತ್ರದಲ್ಲಿ ಒಂದು ಮಾದರಿ ಗ್ರಾಮ ರೂಪಿಸಬೇಕು.

 

ಪರಿಸರ ಸಂಬಂಧಿ ಎಲ್ಲ ಪೂರಕ ವಾತಾವರಣ ನಿರ್ಮಿಸಬೇಕು. ಪರಿಸರ, ಮಳೆನೀರು ಕೊಯ್ಲು, ಸ್ವಚ್ಛತೆ, ಪ್ಲಾಸ್ಟಿಕ್ ನಿರ್ಮೂಲನೆ -ಹೀಗೆ ಎಲ್ಲ ವಿಧದಲ್ಲಿಯೂ ಹಸಿರು ಗ್ರಾಮ ನಿರ್ಮಿಸಬೇಕು. ಈ ಕನಸು ನನಸಾಗಿಸಲು ಈ ತರಬೇತಿ ನೀಡಲಾಗುತ್ತದೆ ಎಂದರು.ಸರ್ಕಾರದ ಪರಿಸರ ಸಂಬಂಧಿ ನೀತಿ ನಿಯಮಾವಳಿಗಳನ್ನು ಪರಿಣಾಮ ಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು `ಎಂಪ್ರಿ~ ವತಿಯಿಂದ ನೇರವಾಗಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯ್ತಿ ಉಪ ಕಾರ್ಯದರ್ಶಿ ಷಡಾಕ್ಷರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪರಿಸರ ಅಧಿಕಾರಿ ಎಂ.ಎಸ್. ಮಹೇಶ್ವರಪ್ಪ, ಅಪರೋ ಕೋಬಾ ಉಪಸ್ಥಿತರಿದ್ದರು.`ಪ್ರಥಮ ಸಂಗಮಶ್ರೀ~ 

 `ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಸಾಲದು. ಸಂಸ್ಕಾರವನ್ನು ಅತ್ಯಂತ ಆವಶ್ಯಕವಾಗಿ ಕೊಡಬೇಕಾಗಿದೆ~ ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಲಹೆ ನೀಡಿದರು.

ಕೊಂಡಜ್ಜಿ ರಸ್ತೆಯ ಬಿಜೆಎಂ ಸ್ಕೂಲ್ ಮತ್ತು ಜಿಎನ್‌ಬಿ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ನಡೆದ `ಅರಿವಿನ ಉತ್ಸವ~ ಕಾರ್ಯಕ್ರಮದಲ್ಲಿ `ಪ್ರಥಮ ಸಂಗಮಶ್ರೀ~ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ದಾವಣಗೆರೆ ಉಪ ವಿಭಾಗಾಧಿಕಾರಿ ಮಹಾಂತೇಶ್ ಬಿಳಗಿ ಮಾತನಾಡಿದರು.ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಂ.ಎಸ್. ವೆಂಕಟೇಶ್ ಮಾತನಾಡಿದರು. ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಕೊಂಡಜ್ಜಿ ಜಯಪ್ರಕಾಶ್, ಸುಮತಿ ಜಯಪ್ಪ, ಎಸ್.ವಿ. ಪಾಟೀಲ್, ಗೋಪಾಲಪುರದ ಬಸಣ್ಣ ಹಾಜರಿದ್ದರು. ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್. ಮಂಜುನಾಥ್ ಅಗಡಿ ಸ್ವಾಗತಿಸಿದರು. ಮಾನಸಾ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕ ಶಿವಕುಮಾರ್ ವಂದಿಸಿದರು.ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಕ್ಕಳ `ಸೃಜನೋತ್ಸವ~ದಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದ ಸ್ಮಿತಾ, ಅನುಷಾ ಅವರನ್ನು ಶಾಲೆಯ ಪ್ರಾಂಶುಪಾಲ ಹನುಮಂತಗೌಡ ಸನ್ಮಾನಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry