ಸತತ ಚಿತ್ರೀಕರಣದಲ್ಲಿ `ಕಾಫಿ ವಿತ್ ಮೈ ವೈಫ್'

7

ಸತತ ಚಿತ್ರೀಕರಣದಲ್ಲಿ `ಕಾಫಿ ವಿತ್ ಮೈ ವೈಫ್'

Published:
Updated:

ಸತತ ಚಿತ್ರೀಕರಣದಲ್ಲಿ `ಕಾಫಿ ವಿತ್ ಮೈ ವೈಫ್'

ನೀಲಶಂಕರ್ ನಿರ್ಮಿಸುತ್ತಿರುವ `ಕಾಫಿ ವಿತ್ ಮೈ ವೈಫ್' ಚಿತ್ರಕ್ಕೆ ಬೆಂಗಳೂರಿನಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ.ಮದನ್ ಕಥೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ವಿದ್ಯಾಸಾಗರ್ ನಿರ್ದೇಶಿಸುತ್ತಿದ್ದಾರೆ. ನೃತ್ಯ ನಿರ್ದೇಶನ ಕೂಡ ವಿದ್ಯಾಸಾಗರ್ ಅವರದೇ. ಆನಂದ್ ಸಂಗೀತ ನಿರ್ದೇಶನ, ವಿಶ್ವ ಛಾಯಾಗ್ರಹಣ, ಎನ್. ಚಂದ್ರಶೇಖರ್ ಹಾಗೂ ಮಂಜಯ್ಯ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ.`ನಮ್ ಏರಿಯಾಲ್ ಅನೀಶ್ ನಾಯಕ, ಸಿಂಧೂ ಲೋಕನಾಥ್ ನಾಯಕಿ.`ಲವ್ ಈಸ್ ಪಾಯ್ಸನ್' ಚಿತ್ರಕ್ಕೆ ಹಾಡುಗಳು

ಕೆ. ಸೋಮಶೇಖರ್ ನಿರ್ಮಿಸುತ್ತಿರುವ `ಲವ್ ಈಸ್ ಪಾಯ್ಸನ್' ಚಿತ್ರದ ಪ್ರಥಮ ಹಂತದ ಚಿತ್ರೀಕರಣ ನಡೆಯುತ್ತಿದೆ.`ಈ ಖಾಲಿ ಹೃದಯದ ಮೇಲೆ, ನೀ ಬರೆದೆ ಒಲವಿನ ಓಲೆ' ಎಂಬ ಗೀತೆಯನ್ನು ಚಿಕ್ಕಮಗಳೂರಿನಲ್ಲೂ `ಕಣ್ಣ ಮುಂದೆ ಕಣ್ಣ ಮುಂದೆ ಚಲಿಸುವ ಕನಸು ನೀನೇನೆ' ಎಂಬ ಗೀತೆಯನ್ನು ಗೋಕರ್ಣ, ಹೊನ್ನಾವರ ಸುತ್ತಮುತ್ತ ಚಿತ್ರೀಕರಿಸಿಕೊಳ್ಳಲಾಯಿತು, ರಾಜೇಶ್, ಖುಷಿ, ಚಂದ್ರು ಭಾಗವಹಿಸಿದ್ದರು. ಶಂಕರ ನೃತ್ಯ ನಿರ್ದೇಶನ. ವೀನಸ್ ಮೂರ್ತಿ ಛಾಯಾಗ್ರಹಣ. ನಿರ್ದೇಶಕ ನಂದನ್ ಪ್ರಭು ನೇತೃತ್ವ ವಹಿಸಿದ್ದರು.

ಚಿತ್ರಕ್ಕೆ ರವಿಶಂಕರ್ ನಾಗ್ ಸಂಭಾಷಣೆ, ಕವಿರಾಜ್ ಸಾಹಿತ್ಯ, ಸಾಯಿಕಿರಣ್ ಸಂಗೀತ, ಬಾಬುಖಾನ್ ಕಲೆ, ಥ್ರಿಲ್ಲರ್ ಮಂಜು ಸಾಹಸ, ಈಶ್ವರ್ ಸಂಕಲನ ಇದೆ. ಕಥೆ, ಚಿತ್ರಕಥೆ ನಿರ್ದೇಶನದ ಹೊಣೆ ನಂದನ್‌ಪ್ರಭು ಅವರದು.`ಸಿಡಿಲ ಮರಿ'ಗೆ ಸ್ಪೆಷಲ್ ಎಫೆಕ್ಟ್

ಹಬೀಬ್ ನಿರ್ಮಾಣದ `ಸಿಡಿಲ ಮರಿ' ಚಿತ್ರಕ್ಕೆ ಸ್ಪೆಷಲ್ ಎಫೆಕ್ಟ್ ಕಾರ್ಯ ಪೂರ್ಣಗೊಂಡಿತು.  ಈ ಚಿತ್ರದ ಕಥೆ, ಚಿತ್ರಕಥೆ, ನಿರ್ದೇಶನ ರಘುರಾಜ್ ಅವರದು.ಸಂಭಾಷಣೆ ಬಿ.ಎ. ಮಧು, ಛಾಯಾಗ್ರಹಣ ಜನಾರ್ದನ್, ಸಂಗೀತ ಎಂ.ಎನ್. ಕೃಪಾಕರ್, ಸಂಕಲನ ಗೋವರ್ಧನ್,  ಸಾಹಸ ಥ್ರಿಲ್ಲರ್ ಮಂಜು, ಕಲೆ ಬಾಬುಖಾನ್, ಸಹನಿರ್ದೇಶನ ವಿಜಯಕುಮಾರ್ ಭದ್ರಾವತಿ ಅವರದು. ತಾರಾಗಣದಲ್ಲಿ ಆಯೇಷಾ, ಜೈ ಜಗದೀಶ್, ಶರತ್ ಲೋಹಿತಾಶ್ವ, ಸತ್ಯಜಿತ್, ಶಿಲ್ಪಾ, ಪೆಟ್ರೋಲ್ ಪ್ರಸನ್ನ, ಜಯಲಕ್ಷ್ಮಿ ಪಾಟೀಲ್, ಸಿದ್ದರಾಜ ಕಲ್ಯಾಣ್‌ಕರ್,ಮೈಸೂರು ಮಂಜುಳ, ಶಂಕರ್ ನಾರಾಯಣ್, ದರ್ಶನ್, ಕಿಂಗ್ ಡ್ಯಾನಿ, ಮೈಸೂರು ಮಲ್ಲೇಶ್ ಹಾಗೂ ಸಂಕಲನಕಾರ ಶ್ಯಾಮ್ ಅಭಿನಯಿಸುತ್ತಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry