ಬುಧವಾರ, ಮೇ 19, 2021
26 °C

ಸತತ ಪರಿಶ್ರಮಕ್ಕೆ ಯಶಸ್ಸು ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಒಳ್ಳೆಯ ಹವ್ಯಾಸಗಳು, ಉತ್ತಮರೊಂದಿಗೆ ಸ್ನೇಹ ಮಾಡಿ ಗುರಿಯಿಟ್ಟುಕೊಂಡು ಸತತವಾಗಿ ಅಭ್ಯಾಸ ಮಾಡಿದರೆ ಜೀವನದಲ್ಲಿ ಯಶಸ್ಸು ಪಡೆಯಬಹುದು ಎಂದು ಪ್ರಾದೇಶಿಕ ಸಾರಿಗೆ ಆಯುಕ್ತ ಜೆ.ಪುರುಷೋತ್ತಮ ಹೇಳಿದರು.ಇಲ್ಲಿನ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕೃತಿ ನೀಡಬೇಕು ಎಂದರು.

ವಿಶ್ರಾಂತ ಕುಲಪತಿ ಪ್ರೊ. ಎಸ್.ಪಿ.ಹಿರೇಮಠ ಉದ್ಘಾಟಿಸಿ, ಬೆಂಗಳೂರು ವಿಜ್ಞಾನ- ತಂತ್ರಜ್ಞಾನದ ಕ್ಷೇತ್ರವಾದರೆ, ಧಾರವಾಡ ಸಾಂಸ್ಕೃತಿ, ಶೈಕ್ಷಣಿಕ ಕೇಂದ್ರವಾಗಿದೆ. ಎಸ್‌ಡಿಎಂ ಸಂಸ್ಥೆ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಿದ್ದು, ವಿದ್ಯಾರ್ಥಿಗಳು ಅವುಗಳ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.ಸಂಸ್ಥೆಯ ಕಾರ್ಯದರ್ಶಿ ಜಿನೇಂದ್ರ ಪ್ರಸಾದ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಡಾ. ಎಸ್. ಮೋಹನಕುಮಾರ ಮಾತನಾಡಿದರು. ಡಾ. ಸಿ.ಡಿ.ಲಕ್ಕಣ್ಣವರ ಉಪಸ್ಥಿತರಿದ್ದರು. ಡಾ. ಕೆ.ಗೋಪಿನಾಥ ಸ್ವಾಗತಿಸಿದರು. ಪ್ರೊ. ಶ್ರೀಶೈಲನ್ ಪರಿಚಯಿಸಿದರು. ಪ್ರೊ. ಎಸ್.ಬಿ.ಕರ್ಜಗಿ ವಂದಿಸಿದರು. ಪ್ರೊ. ವಿ.ಕೆ.ಪರ್ವತಿ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.