ಸತತ ಪ್ರಯತ್ನ ನನ್ನ ಕೈಬಿಡಲಿಲ್ಲ

ಶುಕ್ರವಾರ, ಜೂಲೈ 19, 2019
28 °C

ಸತತ ಪ್ರಯತ್ನ ನನ್ನ ಕೈಬಿಡಲಿಲ್ಲ

Published:
Updated:

ಬೆಂಗಳೂರು: ಅದೊಂದು ಮೂರು ವರ್ಷದ ಪೈಪೋಟಿ. ಪ್ರತಿ ಬಾರಿ ಗೆಲ್ಲುತ್ತಿದ್ದದ್ದು ಕೇರಳದ ಜೋಸೆಫ್ ಅಬ್ರಹಾಂ. ಆದರೆ ಯುವ ಓಟಗಾರ ಸತಿಂದರ್ ಸಿಂಗ್ ಯಾವತ್ತೂ ತಮ್ಮ  ಪ್ರಯತ್ನ ಕೈಬಿಟ್ಟಿರಲಿಲ್ಲ.

ಸತಿಂದರ್ ಅವರ ಆ ಮೂರು ವರ್ಷಗಳ ಪ್ರಯತ್ನ ಹಾಗೂ ಕನಸಿಗೆ ಸೋಮವಾರ ಉದ್ಯಾನ ನಗರಿಯಲ್ಲಿ ಫಲ ಲಭಿಸಿತು. ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಆ ಸೌಭಾಗ್ಯ ಒಲಿಯಿತು.ಕಾರಣ ಪುರುಷರ 400 ಮೀ. ಹರ್ಡಲ್ಸ್‌ನಲ್ಲಿ ಅಬ್ರಹಾಂ ಅವರನ್ನು ಮೊದಲ ಬಾರಿಗೆ ಹಿಂದಿಕ್ಕಿದ ಪಂಜಾಬ್‌ನ ಸತಿಂದರ್ ಚಿನ್ನ ಗೆದ್ದರು.`ಕಳೆದ ಮೂರು ವರ್ಷಗಳಿಂದ ನಾನು 400 ಮೀ.ಹರ್ಡಲ್ಸ್‌ನಲ್ಲಿ ಸ್ಪರ್ಧಿಸುತ್ತಿದ್ದೇನೆ. ಒಮ್ಮೆಯೂ ಅಬ್ರಹಾಂ ಅವರನ್ನು ಹಿಂದಿಕ್ಕಲು ಸಾಧ್ಯವಾಗಿರಲಿಲ್ಲ. ಆದರೆ ನಾನು ಯಾವತ್ತೂ ಪ್ರಯತ್ನ ಕೈಬಿಟ್ಟಿರಲಿಲ್ಲ~ ಎಂದು ಸತಿಂದರ್ ನುಡಿದರು.`ಪ್ರತಿ ಬಾರಿ ನಾನು ಎರಡು ಅಥವಾ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗುತಿತ್ತು. ಆದರೆ ಈ ಬಾರಿ ಅವರನ್ನು ಹಿಂದಿಕ್ಕಿದೆ~ ಎಂದರು.ರಾಷ್ಟ್ರೀಯ ದಾಖಲೆ ಹೊಂದಿರುವ ಅಬ್ರಹಾಂ ಏಷ್ಯನ್  ಕೂಟದ ಚಿನ್ನದ ಪದಕ ವಿಜೇತ ಕೂಡ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry