ಶುಕ್ರವಾರ, ಜೂನ್ 25, 2021
30 °C
ನ್ಯೂಯಾರ್ಕ್‌ನಲ್ಲಿ ಕಟ್ಟಡ ನೆಲಸಮ

ಸತ್ತವರ ಸಂಖ್ಯೆ 7ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌ (ಎಎಫ್‌ಪಿ): ಅನಿಲ ಸೋರಿಕೆಯ ನಂತರ ಸಂಭವಿಸಿದ ಸ್ಫೋಟ ದಿಂದ ಬುಧವಾರ ಮ್ಯಾನ್‌­ಹಟನ್‌ನ ಎರಡು ಅಪಾರ್ಟ್‌­ಮೆಂಟ್‌­ಗಳಿಗೆ ಬೆಂಕಿ ಹೊತ್ತಿಕೊಂಡಿ­ದ್ದರಿಂದ ಏಳು ಮಂದಿ ಸತ್ತಿದ್ದು 6೫ ಜನರು ಗಾಯಗೊಂಡಿದ್ದಾರೆ. ಇದೊಂದು ಭಾರಿ ಅಗ್ನಿ ದುರಂತ ಎಂದು ಹೇಳಿರುವ ನ್ಯೂಯಾರ್ಕ್‌ ಮೇಯರ್‌ ಬಿಲ್ ಡಿಬ್ಲಾಸಿಯೊ ಅವರು, ನೆಲಸಮವಾಗಿರುವ ಎರಡು ಅಪಾ ರ್ಟ್‌­ಮೆಂಟ್‌ನ ಒಂಬತ್ತು ಜನರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.ಬುಧವಾರ ಬೆಳಿಗ್ಗೆ ಈ ದುರಂತ ಸಂಭವಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಭಾರಿ ಶ್ರಮಿಸಬೇಕಾಯಿತು. ಅಪಾ­ರ್ಟ್‌­ಮೆಂಟ್‌ನ ಸುತ್ತಮುತ್ತ ದಟ್ಟ­ವಾದ ಹೊಗೆ ಮತ್ತು ಧೂಳು ಆವರಿಸಿತ್ತು. ಭಾರಿ ಸ್ಫೋಟದ ಸದ್ದು 2001ರ ಭಯೋತ್ಪಾದಕರ ದಾಳಿಯನ್ನು ನೆನಪಿಸಿತು ಎಂದು ಕೆಲವು ಪ್ರತ್ಯಕ್ಷದ­ರ್ಶಿಗಳು ಹೇಳಿದರೆ, ಇನ್ನೂ ಕೆಲವರು ಭೂಮಿ ಕಂಪಿಸಿದಂತಾಯಿತು ಎಂದು ಹೇಳಿದ್ದಾರೆ.ಸ್ಫೋಟ ಸಂಭವಿಸುವುದಕ್ಕೆ 15 ನಿಮಿಷ ಮೊದಲು ದುರಂತಕ್ಕೀಡಾದ ಅಪಾರ್ಟ್‌ಮೆಂಟ್‌ನ ಪಕ್ಕದ ಕಟ್ಟಡದಿಂದ ಅನಿಲ ಸರಬರಾಜು ಕಂಪೆನಿಗೆ ಅನಿಲ ಸೋರಿಕೆಯಾಗಿರಬಹುದು ಎಂಬ ತುರ್ತು ಸಂದೇಶ ರವಾನೆಯಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.