ಶನಿವಾರ, ಮೇ 21, 2022
27 °C

ಸತ್ತ ರೋಗಿ ಇದ್ದಕ್ಕಿದ್ದಂತೆ ಎದ್ದು ಕುಳಿತಾಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ರೋಗಿಯೊಬ್ಬರು ಸತ್ತಿದ್ದಾರೆ ಎಂದು ವೈದ್ಯರು ಹೇಳಿದ ಮೇಲೂ ಆತ ಅಂತಿಮ ಗಳಿಗೆಯಲ್ಲಿ ಇದ್ದಕ್ಕಿದ್ದಂತೆ ಕಣ್ಣು ಬಿಟ್ಟು ಮುಂದೆ ಎದ್ದು ಕೂತರೆ ಹೇಗನ್ನಿಸಬಹುದು... ಒಂದು ಕ್ಷಣ ಮೈ ಜುಮ್ ಎನ್ನುವುದಿಲ್ಲವೆ? ಹೌದು, ಇಂತಹದ್ದೊಂದು ವಿಚಿತ್ರ ಘಟನೆ ಇತ್ತೀಚೆಗೆ ಅಮೆರಿಕದಲ್ಲಿ ನಡೆದಿದೆ.ಸ್ನಾಯು ಸೆಳೆತ ನಿವಾರಕ ಸೇರಿದಂತೆ ಕ್ಸೆನಾಕ್ಸ್, ಬೆನಡ್ರೆಲ್ ಎಂಬ ಔಷಧಿಗಳನ್ನು ಮಿತಿಮೀರಿ ಸೇವಿಸಿದ್ದ ಕೊಲೀನ್ ಎಸ್. ಬರ್ನ್ಸ್ (41) ಎಂಬ ಮಹಿಳೆ ಇಲ್ಲಿನ ಸೇಂಟ್ ಜೋಸೆಫ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ 2009ರಲ್ಲಿ ದಾಖಲಾಗಿದ್ದರು.ಸತತ 4 ವರ್ಷ ಕೋಮಾದಲ್ಲಿದ್ದ ಬರ್ನ್ಸ್ ಅವರು ಹೃದಯ ತೊಂದರೆಯಿಂದ ಸತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಇತ್ತೀಚೆಗೆ ಪ್ರಕಟಿಸಿದ್ದರು. ನಂತರ, ಬರ್ನ್ಸ್ ಅವರ ದೇಹದ ಅಂಗಾಂಗಗಳನ್ನು ಕುಟುಂಬದವರು ದಾನ ಮಾಡಲು ನೀಡಿದ ಒಪ್ಪಿಗೆಯ ಮೇರೆಗೆ, ವೈದ್ಯರು ಅವರ ದೇಹದ ಅಂಗಾಂಗಗಳನ್ನು ತೆಗೆಯಲು ಮುಂದಾದರು. ಇನ್ನೇನು ಅವರ ದೇಹದಿಂದ ಅಂಗ ತೆಗೆಯುವ ಅಂತಿಮ ಪ್ರಕ್ರಿಯೆ ಆರಂಭವಾಗಬೇಕು ಎನ್ನುವಷ್ಟರಲ್ಲಿ ಬರ್ನ್ಸ್ ಅವರಿಗೆ ಪ್ರಜ್ಞೆ ಬಂದು ಕಣ್ಣು ಬಿಟ್ಟು ಎದ್ದುಕುಳಿತರು ಎನ್ನಲಾಗಿದೆ.ರಾಜ್ಯ ಆರೋಗ್ಯ ಇಲಾಖೆ ರೋಗಿಯ ಅನಾರೋಗ್ಯದ ಕಾರಣವನ್ನು ತಪ್ಪಾಗಿ ಅರ್ಥೈಸುವ ಮೂಲಕ ಬದುಕಿರುವ ರೋಗಿಯನ್ನು ಸತ್ತಿದ್ದಾರೆ ಎಂದು ಪ್ರಕಟಿಸಿದ್ದ ಸೇಂಟ್ ಜೋಸೆಫ್ ಆಸ್ಪತ್ರೆಗೆ ರೂ 13.31 ಲಕ್ಷ (22 ಸಾವಿರ ಡಾಲರ್) ದಂಡ ವಿಧಿಸಿದೆ.`ಬದುಕಿದ್ದ ಮಗಳನ್ನು ಸತ್ತಿದ್ದಾಳೆ' ಎಂದು ಪ್ರಕಟಿಸಿದ್ದ ಆಸ್ಪತ್ರೆಯ ನಡೆ ಆಘಾತದ ಜತೆಗೆ ಆಶ್ಚರ್ಯವನ್ನುಂಟು ಮಾಡಿದೆ' ಎಂದು ಬರ್ನ್ಸ್ ತಾಯಿ ಲುಸಿಲ್ಲೆ ಕುಸ್ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.