ಗುರುವಾರ , ಮೇ 13, 2021
24 °C

ಸತ್ತ ಹಂದಿಗಳ ವಾಸನಗೆ ಬೇಸತ್ತ ಜನ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮಸಾಗರ: ಕಳೆದ ತಿಂಗಳಿನಿಂದಲೂ ಪ್ರತಿನಿತ್ಯ ಇಲ್ಲಿನ ವಿವಿಧ ಬಡಾವಣೆಗಳಲ್ಲಿ ಹಂದಿಗಳು ನಿಗೂಢವಾಗಿ ಸಾವಿಗೆ ಬಲಿಯಾಗುತ್ತಿರುವುದು ಮುಂದುವರೆದಿದೆ. ಹೊರ ಬಯಲಿನಲ್ಲಿ ಸತ್ತ ಹಂದಿಗಳನ್ನು ಪಂಚಾಯಿತಿ ಸಿಬ್ಬಂದಿ ಹೊರ ಸಾಗಿಸಿದರೆ ಚರಂಡಿಗಳಲ್ಲಿ, ಕೆಸರಿನಲ್ಲಿ ಸತ್ತಿರುವ ಹಂದಿಗಳನ್ನು ಸಾಗಿಸುತ್ತಿಲ್ಲವಾದ್ದರಿಂದ ಗ್ರಾಮದ ತುಂಬ ದುರ್ವಾಸನೆ ಬೀರುತ್ತಿದ್ದು ಅಂತಹ ಸ್ಥಳದಲ್ಲಿ ವಾಸವಿರುವ ಸಾರ್ವಜನಿಕರ ಸ್ಥಿತಿ ನರಕ ಯಾತನೆಯಾಗಿದೆ.ಈ ಕುರಿತು ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿ ಗಮನಕ್ಕೆ ಬಂದರೆ ಹಂದಿಗಳ ಮಾಲಿಕರನ್ನು ಕರೆಸಿ ಹೆಳಿದ್ದೇವೆ, ವೈದ್ಯರಿಗೆ ತಿಳಿಸಿದ್ದೇವೆ, ಔಷಧಿಗಾಗಿ ಜಿಲ್ಲಾಸ್ಪತ್ರೆಗೆ ಬರೆದಿದ್ದೇವೆ ಎಂದೆಲ್ಲ ಹಾರಿಕೆ ಉತ್ತರ ನೀಡುತ್ತಿರುವುದು ಬೇಸರ ತಂದಿದೆ ಎಂದು ಜನ ಹೇಳುತ್ತಾರೆ.ಸಂತೆ ಬಜಾರಿನಲ್ಲಿರುವ ಗ್ರಾಮ ಪಂಚಾಯಿತಿ ಸದಸ್ಯ ಡಾ.ಮಾರುತಿ ರಂಗ್ರೇಜ್ ಅವರ ಮನೆಯ ಹತ್ತಿರವೇ ಹಂದಿ ಸತ್ತು ಬಿದ್ದು ಎರಡು ದಿನಗಳಾಗಿದ್ದರೂ ಪಂಚಾಯಿತಿ ಸಿಬ್ಬಂದಿ ಸಾಗಿಸದೇ ಇರುವುದುನ್ನು ನೋಡಿದರೆ ಇನ್ನು ಸಾಮಾನ್ಯ ಜನರ ಮನೆಗಳ ಹತ್ತಿರ ಸತ್ತು ಬಿದ್ದರೆ ಇನ್ನಾವ ಪರಿಸ್ಥಿತಿ ಇರಬಹುದು ಎಂದು ಜನ ಕೇಳುತ್ತಾರೆ.ಹಂದಿಗಳು ಗಂಟಲು ಬೇನೆಯಿಂದ ನರಳುತ್ತಿದ್ದು ಆ ಕಾರಣದಿಂದಲೇ ಈ ಪರಿಯಾಗಿ ಹಂದಿಗಳು ಸಾಯಲು ಕಾರಣವಾಗಿದೆ, ಗ್ರಾಮದಲ್ಲಿರುವ ಹಂದಿಗಳನ್ನು ಒಂದು ಕಡೆ ಕೂಡಿ ಹಾಕಿ ಎಚ್‌ಎಸ್ ಎಂಬ ಲಸಿಕೆ ಹಾಕಿದರೆ ಹಂದಿಗಳ ಸಾವಿನ ಪ್ರಮಾಣ ಕಡಿಮೆಯಾಗುತ್ತದೆ, ಆದರೆ ಈ ಕುರಿತಾಗಿ ಎಷ್ಟೆ ಹೇಳಿದರು ಹಂದಿಗಳ ಮಾಲಿಕರು ಇದರತ್ತ ಗಮನಹರಿಸುತ್ತಿಲ್ಲ ಎಂದು ಪಶುಚಿಕಿತ್ಸಾಲಯದ ಅಧಿಕಾರಿ ಬಿ.ಎಂ.ಢವಳಗಿ ಹೇಳಿದರು.ಈ ಕುರುತಾಗಿ ಸ್ಥಳಿಯ ವೈದ್ಯಾಧಿಕಾರಿ ಡಾ.ಉಮಾಕಾಂತ ರಾಜಗಿರಿಯವರು ಈ ಭಾಗದಲ್ಲಿ ಹಂದಿಗಳ ಸಾವಿನಿಂದಾಗಿ ಅಂಥಹ ಯಾವುದೇ ಮಾರಕ ರೋಗಗಳು ಇದುವರೆಗೆ ಕಂಡು ಬಂದಿಲ್ಲ. ಹಂದಿಗಳು ಸಾಯುತ್ತಿರುವ ಬಗ್ಗೆ ಮತ್ತು ತೆಗೆದುಕೊಳ್ಳಬೇಕಾದ ಮುಂಜಾಗೃತೆ ಕ್ರಮಗಳ ಬಗ್ಗೆ ಪಶು ವೈದ್ಯರಿಗೆ ಮತ್ತು ಗ್ರಾಮ ಪಂಚಾಯಿತಿಯವರಿಗೆ ತಿಳಿಸಲಾಗಿದೆ ಎಂದು ಹೇಳಿದರು.ಈಗಾಗಲೇ ಎಲ್ಲ ಹಂದಿಗಳ ಮಾಲಿಕರನ್ನು ಕರೆಸಿ ರೋಗಗ್ರಸ್ಥ ಹಂದಿಗಳನ್ನು ದೂರ ಸಾಗಿಸಿ ಎಂದು ತಾಕೀತು ಮಾಡಿದ್ದರೂ ಯಾವ ಮಾಲಿಕರು ಅದರತ್ತ ಗಮನಹರಿಸಿಲ್ಲ, ಹಂದಿಗಳು ಈ ಪ್ರಮಾಣದಲ್ಲಿ ಸಾಯುತ್ತಿರುವದರಿಂದ ಪಟ್ಟಣದಲ್ಲಿ ಪರಿಸರ ನೈರ್ಮಲ್ಯ ಹಾಗೂ ಸಾರ್ವಜನಿಕರು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಮಗೂ ಗೊತ್ತು ಆ ಕಾರಣದಿಂದಲೇ ಅಂತಹ ಪ್ರದೇಶದಲ್ಲಿ ಈಗಾಗಲೇ ರೋಗನಿರೋಧಕ ಔಷಧಿ ಸಿಂಪಡಣೆ ಮಾಡಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಧರಿಯಾಬಿ ಬಳೂಟಗಿ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.