ಸೋಮವಾರ, ಏಪ್ರಿಲ್ 19, 2021
23 °C

ಸತ್ಯಂ ಹಗರಣ: ಐಸಿಎಐ ಸಮಿತಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಪಿಟಿಐ): ಸತ್ಯಂ ಕಂಪ್ಯೂಟರ್ಸ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೆಕ್ಕಪರಿಶೋಧನೆ ಲೋಪಗಳ ಕುರಿತು ಪರಿಶೀಲನೆ ನಡೆಸಲು ಮೂವರು ಸದಸ್ಯರ ಪ್ರತ್ಯೇಕ ಶಿಸ್ತು ಸಮಿತಿ ರಚಿಸಲಾಗಿದೆ ಎಂದು ಭಾರತೀಯ ಲೆಕ್ಕಪರಿಶೋಧಕರ ಸಂಘದ (ಐಸಿಎಐ) ಅಧ್ಯಕ್ಷ ಜಿ. ರಾಮಸ್ವಾಮಿ ಶನಿವಾರ ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆಯಲ್ಲಿ ‘ಐಸಿಎಐ’ ಈ ಸಮಿತಿ  ರಚಿಸಿದ್ದು, ಶೀಘ್ರದಲ್ಲಿಯೇ ವರದಿ ನೀಡಲಿದೆ. ದೇಶದಲ್ಲಿ ಕಾರ್ಪೊರೇಟ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಲೆಕ್ಕಪರಿಶೋಧನೆ ಕ್ಷೇತ್ರದಲ್ಲಿ ಮತ್ತಷ್ಟು ಬಿಗಿ ನಿಯಮಗಳನ್ನು ತರಲು, ಈಗಿರುವ ಕಾಯ್ದೆಗೆ  ತಿದ್ದುಪಡಿ ತರಬೇಕೆಂದು ಸಂಘವು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಇದರ ಜತೆಗೆ ಹೊಸ ಲೆಕ್ಕ  ಪರಿಶೋಧನೆ ಮಾನದಂಡವನ್ನು ಜಾರಿಗೊಳಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ  ಸಚಿವಾಲಯಕ್ಕೆ ಮನವಿ ಮಾಡಲಾಗಿದೆ ಎಂದು  ಅವರು ತಿಳಿಸಿದರು. ‘ಐಸಿಎಐ’ ಈಗಾಗಲೇ ‘ಐಎಫ್‌ಆರ್‌ಎಸ್’ ಕೌನ್ಸಿಲ್ ಆಫ್ ಜಪಾನ್ ಜತೆ ಲೆಕ್ಕಪರಿಶೋಧನೆಯ ಹೊರಗುತ್ತಿಗೆಗೆ ಒಪ್ಪಂದ ಮಾಡಿಕೊಂಡಿದೆ. ಭಾರತೀಯ ಲೆಕ್ಕಪರಿಶೋಧಕರಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ವೃತ್ತಿಯಲ್ಲಿ ಸುಧಾರಣೆ ತರಲು ಹಲವು ಪರಿಷ್ಕತ ಉಪಕ್ರಮಗಳನ್ನು ಜಾರಿಗೊಳಿಸಲಾಗಿದೆ ಎಂದರು. ‘ಐಸಿಎಐ’ನ ದಕ್ಷಿಣ ವಲಯದ ಅಧ್ಯಕ್ಷ ಕೆ. ರಘು, ಬೆಂಗಳೂರು ಶಾಖೆಯ ಅಧ್ಯಕ್ಷ ವೆಂಕಟೇಶ್ ಬಾಬು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.