ಸತ್ಯನಾರಾಯಣ ಬಿಬಿಎಂಪಿಯ ನೂತನ ಮೇಯರ್

7

ಸತ್ಯನಾರಾಯಣ ಬಿಬಿಎಂಪಿಯ ನೂತನ ಮೇಯರ್

Published:
Updated:
ಸತ್ಯನಾರಾಯಣ ಬಿಬಿಎಂಪಿಯ ನೂತನ ಮೇಯರ್

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿ.ಎಸ್ ಸತ್ಯನಾರಾಯಣ (ಕಟ್ಟೆ ಸತ್ಯ) ಬುಧವಾರ ಆಯ್ಕೆಯಾಗಿದ್ದಾರೆ.ಇಂದು ನಡೆದ ಚುನಾವಣೆಯಲ್ಲಿ  ಮೇಯರ್ ಆಗಿ ಸತ್ಯನಾರಾಯಣ ಮತ್ತು ಉಪಮೇಯರ್ ಆಗಿ ಕಾಂಗ್ರೆಸ್‌ನ ಇಂದಿರಾ ಆಯ್ಕೆಯಾಗಿದ್ದಾರೆ.ಬಿ.ಎನ್ ಸತ್ಯನಾರಾಯಣ ಅವರು ಬಸವನಗುಡಿ ವಾರ್ಡ್ ಅನ್ನು ಪ್ರತಿನಿಧಿಸಿದ್ದರೆ, ಇಂದಿರಾ ಅವರು ಬ್ಯಾಟರಾಯನಪುರ ವಾರ್ಡ್‌ನಿಂದ  ಆರಿಸಿ ಬಂದಿದ್ದಾರೆ. ಉಪ ಮೇಯರ್ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದ್ದರಿಂದ ಕಾಂಗ್ರೆಸ್‌ನ ಇಂದಿರಾ ಉಪ ಮೇಯರ್ ಆಗಿ ಆಯ್ಕೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry