ಸೋಮವಾರ, ಮೇ 23, 2022
30 °C

ಸತ್ಯಮಂಗಲ ಕೆರೆಗೆ ಕಾಯಕಲ್ಪ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: `ನಗರದ ಹೊರಭಾಗದ ಸತ್ಯಮಂಗಲ ಕೆರೆಯ ಅಭಿವೃದ್ಧಿ ಕಾಮಗಾರಿಯನ್ನು ಆರಂಭಿಸಲಾಗಿದ್ದು 2013ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ~ ಎಂದು ಶಾಸಕ ಎಚ್.ಎಸ್. ಪ್ರಕಾಶ್ ತಿಳಿಸಿದರು.

ಕೆರೆಯ ಬಳಿ ಆರಂಭವಾದ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಅವರು ಪತ್ರಕರ್ತರೊಡನೆ ಮಾತನಾಡುತ್ತ ಈ ವಿವರ ನೀಡಿದರು.4.3 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಕೇಂದ್ರ ಸರ್ಕಾರದ 13ನೇ ಹಣಕಾಸು ಯೋಜನೆಯಡಿ ಇದಕ್ಕೆ ಹಣ ಬಿಡುಗಡೆ ಮಾಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂದರು.ಕೆರೆಯ ಏರಿ ಅಭಿವೃದ್ಧಿಗೆ 102.08ಲಕ್ಷ, ಸೌಂದರ್ಯೀಕರಣ ಹಾಗೂ ವಾಕಿಂಗ್ ಪಾತ್‌ಗಾಗಿ 38.22ಲಕ್ಷ, ಡ್ರಾಫ್ಟ್ ಚಾನಲ್‌ಗೆ 115.35 ಲಕ್ಷ, ಹೂಳು ತೆಗೆಯಲು 86.25, ತಂತಿ ಬೇಲಿ ನಿರ್ಮಾಣಕ್ಕೆ 8.37ಲಕ್ಷ, ಕೋಡಿಗೆ ಸೇತುವೆ ನಿರ್ಮಾ ಣಕ್ಕೆ 53.42 ಲಕ್ಷ, ವಿದ್ಯುದೀಕರಣಕ್ಕೆ 12.54 ಹಾಗೂ ಇತರೆ ವೆಚ್ಚಕ್ಕೆ 13.76ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ.`ಚನ್ನಪಟ್ಟಣ ಕೆರೆ ಒಡೆದು ಅಲ್ಲಿ ಬಸ್ ನಿಲ್ದಾಣ ನಿರ್ಮಿಸಿದ ಬಳಿಕ ನಗರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಂತ ರ್ಜಲ ಮಟ್ಟ ಕುಸಿದಿದೆ. ಸತ್ಯವಂಗಲ ಕೆರೆ ಅಭಿವೃದ್ಧಿ ಪಡಿಸಿದರೆ ಸ್ವಲ್ಪಮಟ್ಟಿಗೆ ಅಂತರ್ಜಲ ಮಟ್ಟ ಸುಧಾರಿಸಲಿದೆ ಎಂದು ಪ್ರಕಾಶ್ ನುಡಿದರು.ಸತ್ಯವಂಗಲ ಕೆರೆ ಸುತ್ತ ವಾಕಿಂಗ್ ಪಾತ್ ನಿರ್ಮಾಣದ ಜತೆಗೆ ಬೋಟಿಂಗ್ ವ್ಯವಸ್ಥೆ, ಲಾನಿಂಗ್ ಮತ್ತಿತರ ಸೌಲಭ್ಯ ವನ್ನು ಕಲ್ಪಿಸಲಾಗುವುದು. ಕೆರೆಗೆ ಕಸ ಹಾಕದಂತೆ ನಿಯಂತ್ರಿಸಲಾಗುವುದು. ಈ ಭಾಗದ ಕಸದ ನಿರ್ವಹಣೆಗಾಗಿ ನಗರದ ಹೊರಭಾಗದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಕಸವಿಲೇವಾರಿ ಘಟಕ ಸ್ಥಾಪಿಸಲಾಗುವುದು. ಹುಣಸಿನ ಕೆರೆ ಯನ್ನು ಸಹ ಇದೇ ರೀತಿ ಅಭಿವೃದ್ಧಿ ಪಡಿಸುವ ಬಗ್ಗೆ  ಚಿಂತಿಸಲಾಗುತ್ತಿದೆ ಎಂದರು.ಕಾಮಗಾರಿ ನಂತರ ಕೆರೆಯ ಅಭಿವೃದ್ಧಿ ಹಾಗೂ ನಿರ್ವಹಣೆ ಹೊಣೆ ಯನ್ನು ನಗರಸಭೆ ಅಥವಾ ಗ್ರಾಮ ಪಂಚಾಯಿತಿಗೆ ವಹಿಸಲಾಗು ವುದು ಎಂದು ಶಾಸಕರು ತಿಳಿಸಿದರು.ಗ್ರಾ.ಪಂ. ಅಧ್ಯಕ್ಷೆ ಪ್ರೇಮಮ್ಮ, ಸದಸ್ಯ ಪುರುಷೋತ್ತಮ ಮತ್ತಿತರರು ಶಾಸಕರ ಜತೆಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.