ಸತ್ಯಮಂಗಲ ಹುಲಿ ಅಭಯಾರಣ್ಯ

7

ಸತ್ಯಮಂಗಲ ಹುಲಿ ಅಭಯಾರಣ್ಯ

Published:
Updated:

ನವದೆಹಲಿ:  ಅಳಿವಿನ ಅಂಚಿನಲ್ಲಿರುವ ಹುಲಿ ಸಂತತಿ ರಕ್ಷಿಸಲು ಕೇಂದ್ರ ಸರ್ಕಾರ ದೇಶದಲ್ಲಿ ಮತ್ತಷ್ಟು ಹುಲಿ ಅಭಯಾರಣ್ಯ ಸ್ಥಾಪಿಸಲು ತೀರ್ಮಾನಿಸಿದ್ದು, ರಾಜ್ಯದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಸತ್ಯಮಂಗಲ ಅರಣ್ಯ ಪ್ರದೇಶವನ್ನು `ಹುಲಿ ಅಭಯಾರಣ್ಯ~ ಎಂದು ಘೋಷಿಸಲು ನಿರ್ಧರಿಸಿದೆ.

ಸತ್ಯಮಂಗಲ ಪ್ರದೇಶ ಈಗಾಗಲೇ `ವನ್ಯಜೀವಿ ಸಂರಕ್ಷಿತ ತಾಣ~ವಾಗಿದೆ. ಇದರ ಜೊತೆ ಆಂಧ್ರಪ್ರದೇಶದಲ್ಲಿ ಕವಲ್ ಅರಣ್ಯ ಪ್ರದೇಶವನ್ನೂ `ಹುಲಿ ಅಭಯಾರಣ್ಯ~ ಎಂದು ಘೋಷಿಸಲಾಗುತ್ತದೆ.

ಹುಲಿ ಸಂರಕ್ಷಣೆ ಕುರಿತು ಮಂಗಳವಾರ ನಡೆದ ಪ್ರಾದೇಶಿಕ ಪರಿಶೀಲನಾ ಸಭೆಯಲ್ಲಿ ಕೇಂದ್ರ ಪರಿಸರ ಖಾತೆ ಸಚಿವೆ ಜಯಂತಿ ನಟರಾಜನ್ ಈ ವಿಚಾರ ತಿಳಿಸಿದರು.

ಸತ್ಯಮಂಗಲ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ರಾಜ್ಯದ `ಬಿಆರ್‌ಟಿ~ ಅರಣ್ಯವನ್ನು ಕೆಲ ತಿಂಗಳ ಹಿಂದಷ್ಟೇ ಹುಲಿ ಅಭಯಾರಣ್ಯ ಎಂದು ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry