ಸತ್ಯಮೇವ ಜಯತೆಗೆ ಕರ್ನಾಟಕ ಅನುಮತಿಸಲಿ - ಠಾಕ್ರೆ

7

ಸತ್ಯಮೇವ ಜಯತೆಗೆ ಕರ್ನಾಟಕ ಅನುಮತಿಸಲಿ - ಠಾಕ್ರೆ

Published:
Updated:

ಮುಂಬೈ (ಐಎಎನ್‌ಎಸ್): ಬಾಲಿವುಡ್ ನಟ ಅಮೀರ್ ಖಾನ್ ನಿರೂಪಣೆಯ ಕಿರುತೆರೆಯ ಕಾರ್ಯಕ್ರಮ `ಸತ್ಯಮೇವ ಜಯತೆ~ಯ ಪ್ರಸಾರಕ್ಕೆ ಕರ್ನಾಟಕ ಸರ್ಕಾರ ಅನುಮತಿ ನೀಡಬೇಕೆಂದು ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಮಂಗಳವಾರ ಆಗ್ರಹಿಸಿದರು.ಶಿವಸೇನಾ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ಈ ಕುರಿತಂತೆ ಸಂಪಾದಕೀಯ ಬರೆದಿರುವ ಠಾಕ್ರೆ ~ಕಳೆದ ಭಾನುವಾರ ಪ್ರಸಾರವಾದ `ಸತ್ಯಮೇವ ಜಯತೆ~ ಕಾರ್ಯಕ್ರಮದ ಮೊದಲ ಕಂತು ದೇಶದಾದ್ಯಂತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಸಂಕುಚಿತ ಮನೋವೃತ್ತಿಯ ಕನ್ನಡ ಚಿತ್ರ ನಿರ್ಮಾಪಕರು ತೋರಿಸಿದ ವಿರೋಧದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಾರ್ಯಕ್ರಮವನ್ನು ತಡೆಹಿಡಿಯುವ ನಿರ್ಣಯ ಕೈಗೊಳ್ಳಲಾಗಿದೆ~ ಎಂದು ಹೇಳಿದ್ದಾರೆ.`ಮುಖ್ಯವಾಗಿ ಅಮೀರ್ ಖಾನ್, ಶಾರೂಖ್ ಖಾನ್ ಇಲ್ಲವೇ ಭಾರತದಲ್ಲಿ  ಕ್ರಿಕೆಟ್ ಆಡುವ ಪಾಕಿಸ್ತಾನದ ತಂಡದಲ್ಲಿರುವ ಇತರೆ ಎಲ್ಲ ಖಾನ್‌ಗಳಂತಲ್ಲ~ ಎಂದು ಹೇಳಿರುವ ಠಾಕ್ರೆ `(ಅಮೀರ್) ಕಾರ್ಯಕ್ರಮ ಮತ್ತು ಸಿನಿಮಾ ಯಾವಾಗಲೂ ದೇಶಭಕ್ತಿ ಹಾಗೂ ಪ್ರೀತಿಯಲ್ಲಿ ದೇಶದ ಮೆರೆಯನ್ನು ಮೀರಿವೆ. ಅವರು ಯಾವಾಗಲೂ ಯುವಕರಿಗೆ ಸ್ಫೂರ್ತಿ~ ಎಂದು ಬರೆದಿದ್ದಾರೆ.

 

ನಮ್ಮ ದೃಷ್ಟಿಕೋನದಲ್ಲಿ ಪ್ರಾಂತೀಯ ಮನೋಭಾವದಿಂದ ಇಲ್ಲವೇ  ಸಾರ್ವಜನಿಕರು ನೋಡದಂತೆ ಕಾರ್ಯಕ್ರಮ ತಡೆಹಿಡಿಯಬಾರದು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಕಾರ್ಯಕ್ರಮ ಪ್ರಸಾರಕ್ಕೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.`ಸತ್ಯಮೇವ ಜಯತೆ~ ಕಾರ್ಯಕ್ರಮವನ್ನು ಕನ್ನಡದಲ್ಲಿ ಡಬ್ಬಿಂಗ್ ಮಾಡಿ ಪ್ರಸಾರ ಮಾಡಲು ಬಯಸಿದ ಅಮೀರ್ ಖಾನ್ ಅವರ ನಿಲುವಿಗೆ ಕನ್ನಡ ಚಿತ್ರರಂಗದ ಹಲವು ನಟ, ನಿರ್ಮಾಪಕರು ಹಾಗೂ ಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಮೀರ್ ಅದರಿಂದ ಹಿಂದೆ ಸರಿದಿದ್ದನ್ನು ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry