ಸೋಮವಾರ, ಮೇ 17, 2021
26 °C

ಸತ್ಯಮೇವ ಜಯತೆ ಕನ್ನಡಕ್ಕೆ ಡಬ್ಬಿಂಗ್ ಇಲ್ಲ: ಸುವರ್ಣ ವಾಹಿನಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಿಂದಿ ನಟ ಅಮೀರ್‌ಖಾನ್ ನಡೆಸಿಕೊಡುವ `ಸತ್ಯಮೇವ ಜಯತೆ~ ಕಾರ್ಯಕ್ರಮವನ್ನು ಕನ್ನಡಕ್ಕೆ ಡಬ್ ಮಾಡದೇ ಇರಲು ಸುವರ್ಣ ವಾಹಿನಿ ನಿರ್ಧರಿಸಿದೆ.`ಪ್ರಜಾವಾಣಿ~ಯೊಂದಿಗೆ ಮಾತನಾಡಿದ ವಾಹಿನಿಯ ವಾಣಿಜ್ಯ ವಿಭಾಗದ ಮುಖ್ಯಸ್ಥ ಅನೂಪ್ ಚಂದ್ರಶೇಖರ್, `ಕಾರ್ಯಕ್ರಮದ ಕುರಿತಂತೆ ಅಪಸ್ವರಗಳು ಕೇಳಿ ಬಂದವು. ಈ ಹಿನ್ನೆಲೆಯಲ್ಲಿ ಅಮೀರ್‌ಖಾನ್ ಪಾಲ್ಗೊಂಡಿರುವ ಈ ರಿಯಾಲಿಟಿ ಶೋ ಅನ್ನು ಯಾವುದೇ ಕಾರಣಕ್ಕೂ ಡಬ್ ಆಗಲಿ ಪ್ಯಾರಾ ಡಬ್ ಆಗಲಿ ಮಾಡದಿರಲು ನಿರ್ಧರಿಸಲಾಯಿತು~ ಎಂದು ಹೇಳಿದರು.ಅಮೀರ್‌ಖಾನ್ ಈ ಹಿಂದೆ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಸತ್ಯ ಮೇವ ಜಯತೆ ಕಾರ್ಯಕ್ರಮವನ್ನು ಡಬ್ ಮಾಡಲು ಚಿಂತಿಸಿದ್ದರು. ಕಾರ್ಯಕ್ರಮದ ಕನ್ನಡ ಡಬ್ಬಿಂಗ್‌ಗೆ ಶಿವರಾಜ್‌ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ಗಣ್ಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.