ಸತ್ಯಾಗ್ರಹಿ ಗಾಂಧಿ, ಸರಳ ಶಾಸ್ತ್ರಿಗೆ ನಮನ

7

ಸತ್ಯಾಗ್ರಹಿ ಗಾಂಧಿ, ಸರಳ ಶಾಸ್ತ್ರಿಗೆ ನಮನ

Published:
Updated:

ಗದಗ; ದೇಶಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟ ಮಹಾನ್ ಚೇತನ ಮಹಾತ್ವ ಗಾಂಧೀಜಿ ಅವರ ತತ್ವಾದರ್ಶ ಗಳನ್ನು  ಎಲ್ಲರೂ ಅನುಕರಣೆ ಮಾಡದೇ ಅನುಸರಣೆ ಮಾಡಬೇಕು ಎಂದು ಜಿಲ್ಲಾ ಧಿಕಾರಿ ಪಾಂಡುರಂಗ ನಾಯಕ ಕರೆ ನೀಡಿದರು.   ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ  ಏರ್ಪಡಿಸಿದ್ದ ಗಾಂಧೀಜಿ ಜನ್ಮ ದಿನಾ ಚರಣೆ  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  ಗಾಂಧೀಜಿ ಅವರ ಮೌಲ್ಯಗಳನ್ನು ಅರ್ಥೈಸಿಕೊಂಡು ಸಾಧ್ಯವಾದಷ್ಟು ಮಟ್ಟಿಗೆ ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಧ್ಯೇಯೋದ್ದೇಶಗಳು ಮತ್ತು ನಡೆದ ದಾರಿ ನಮಗೆ ಮಾರ್ಗದರ್ಶನವಾಗಲಿ ಎಂದು ಹೇಳಿದರು.ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಪ್ರೇಮನಾಥ  ಗರಗ ಮಾತನಾಡಿದರು.  ಹೆಚ್ಚುವರಿ ಜಿಲ್ಲಾಧಿಕಾರಿ  ಪಿ.ಟಿ. ರುದ್ರೇ ಗೌಡ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ, ವಿವಿಧ ಇಲಾಖೆ ಅಧಿಕಾರಿ ಗಳು ಹಾಜರಿದ್ದರು.ಗಜೇಂದ್ರಗಡ ವರದಿ

ಗಜೇಂದ್ರಗಡ:
ಗಾಂಧೀಜಿಯವರ ಹೋರಾಟದ ಮನೋಭಾವ ಯುವ ಪೀಳಿಗೆಗೆ ಆದರ್ಶಪ್ರಾಯವಾಗಿ ಉಳಿ ದಿವೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಅಹಿಂಸಾ ತತ್ವಗಳನ್ನು ಅಳವಡಿಸಿಕೊಳ್ಳು ವುದು ಸೂಕ್ತ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಚಳಗೇರಿ ಹೇಳಿದರು.ಇಲ್ಲಿನ ಪುರಸಭೆ ಕಾರ್ಯಾಲಯದಲ್ಲಿ `ಗಾಂಧಿ ಜಯಂತಿ~ ಪ್ರಯುಕ್ತ ಆಯೋ ಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಪುರಸಭೆ ಅಧ್ಯಕ್ಷೆ ದೇವಕ್ಕ ಬೆಳವಣಿಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಭಾಸ್ಕರ ರಾಯಬಾಗಿ, ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ, ಸದಸ್ಯರಾದ ಪ್ರಭು ಚವಡಿ, ರಾಜೇಂದ್ರ ಘೋರ್ಪಡೆ, ಬಸವರಾಜ ಬಂಕದ, ತಿಮ್ಮಣ್ಣ ವನ್ನಾಲ, ವೆಂಕಟೇಶ ಮುದ ಗಲ್, ಎಂ.ಬಿ.ನಿಡಶೇಸಿ ಮುಂತಾದವರು ಉಪಸ್ಥಿತರಿದ್ದರು. ಸರ್ಕಾರಿ ಉರ್ದು ಶಾಲೆ: ಗಾಂಧೀಜಿ ಅವರ ಹೋರಾಟದ ಬದುಕು ಪ್ರಸ್ತುತ ಯುವ ಪೀಳಿ ಆದರ್ಶ ಪ್ರಾಯ ಎಂದು ಮುಖ್ಯೋಪಾಧ್ಯಾಯ ಎಂ.ಡಿ. ಸರ್ಕಾವಸ್ ಹೇಳಿದರು.ಇಲ್ಲಿನ ಸರ್ಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಗಾಂಧಿ ಜಯಂತಿ ಕಾರ್ಯ ಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಗಾಂಧೀಜಿ ವಿಶ್ವ ಕಂಡ ಮಹಾನ್ ಅಹಿಂಸಾತ್ಮಕ ಹೋರಾಟಗಾರರು ಎಂದು ಬಣ್ಣಿಸಿದರು.ಶೌಚಾಲಯ ಸ್ವಚ್ಛತೆ:
ಗಾಂಧಿ ಜಯಂತಿ ಅಂಗವಾಗಿ ಶಾಲಾ ವಿದ್ಯಾರ್ಥಿ ಗಳು ಶಾಲಾ ಆವರಣವನ್ನು ಸ್ವಚ್ಛಗೊಳಿ ಸಿದರು. ಶಾಲೆಯ ಶೌಚಾ ಲಯಗಳನ್ನು ಸ್ವಚ್ಛಗೊಳಿಸುವ ಮೂಲಕ ಗಾಂಧೀಜಿ ಯವರ ಆದರ್ಶ ಪ್ರಾಯಗಳನ್ನು ಪಾಲಿಸಿದರು.ಎಸ್.ಎಂ.ಡಂಬಳ, ಎಫ್.ಎಂ.ಮಕಾ ನದಾರ, ವಿ.ಎಂ.ಬಡಿಗೇರ, ನಸೀಮಾ ದಿಂಡವಾಡ, ಶಹಜಾನ ಆರಗಿದ್ದಿ, ಸಬೀಯಾ ಬೇಗಂ, ಮೆಹಬೂಬ ಹಣಗಿ ಮುಂತಾದವರು ಉಪಸ್ಥಿತರಿದ್ದರು.ಭೂಮರಡ್ಡಿ ಶಾಲೆ: ಇಲ್ಲಿನ ಎಸ್.ಎಂ.ಭೂಮರಡ್ಡಿ ಸಂಯುಕ್ತ ಪ್ರೌಢ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಯ ಆರ್.ಕೆ. ಮಾಳೋದೆ ಗಾಂಧಿಜಿ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಕೆ.ಬಿ.ಚಾಗರಿ, ಎಂ.ಟಿ.ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.ಬಸವೇಶ್ವರ ವೃತ್ತ: ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಜಗಜ್ಯೋತಿ ಬಸವೇಶ್ವರ ಗೆಳೆಯರ ಬಳಗ ಹಾಗೂ ವರ್ತಕರ ವತಿಯಿಂದ ಗಾಂಧಿ ಜಯಂತಿ ಯನ್ನು ಆಚರಿಸಲಾಯಿತು.ಗೆಳೆಯರ ಬಳಗದ ಅಧ್ಯಕ್ಷ ಸಿ.ಎಸ್. ವಾಲಿ ಮಾತನಾಡಿದರು. ಅಪ್ಪಣ್ಣ ಮಹೇಂದ್ರಕರ್, ಶರಣಪ್ಪ ರೇವಡಿ, ಚನ್ನಬಸಪ್ಪ ವಾಲಿ, ಮಹಾದೇವಪ್ಪ ಪವಾರ, ಮರ್ತುಜಾ ಜಾಲಿಹಾಳ, ಶ್ರೀಕಾಂತ ತಾಳಿಕೋಟಿ, ಮಹಾಂತೇಶ ಸಂಗಮದ, ನಿಂಗಪ್ಪ ಹೂಗಾರ, ನಿಂಗಪ್ಪ ಕುಂಬಾರ, ಆಲ್ತಾಫ್ ಕರಮುಡಿ, ಸಲಿಂ ಮೋಮಿನ, ಸಂಗಪ್ಪ ಯಲಬುಣಚಿ, ಅಜಿತ ನಾವಡೆ, ಪ್ರಶಾಂತ ಶಿರೋಡಕರ್ ಮುಂತಾದವರು ಉಪಸ್ಥಿತರಿದ್ದರು.ಮುಂಡರಗಿ ವರದಿ


ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅಧಿಕಾರ ವ್ಯಾಮೋಹಗಳಿಂದ ಬಹು ದೂರವಿದ್ದ ಲಾಲಬಹದ್ದೂರ ಶಾಸ್ತ್ರಿ ಯಂತಹ ಜನನಾಯಕರು ಇಂದು ತೀರಾ ವಿರಳವಾಗುತ್ತಿದ್ದು, ಭಾರತವನ್ನು ಒಂದು ಆದರ್ಶ ರಾಷ್ಟ್ರವನ್ನಾಗಿ ಮಾಡಲು ಅಂತಹ ಮಹಾನ್ ನಾಯಕರು ಮತ್ತೆ ಹುಟ್ಟಿ ಬರಬೇಕಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಶಿಯೆಶನ್‌ನ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಅನ್ನದಾನಿ ಮೇಟಿ ಹೇಳಿದರು.ಸ್ಥಳೀಯ ರೋಟರಿ ಶಿಕ್ಷಣ ಸಂಸ್ಥೆಯ ವಿ.ಜಿ.ಲಿಂಬಿಕಾಯಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲಬಹಾದ್ಧೂರ ಶಾಸ್ತ್ರಿ ಜಯಂತಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಕಾಶೀನಾಥ ಬಿಳಿಮಗ್ಗದ, ಹನುಮಂತಪ್ಪ ಅರಳಿ ಉಪನ್ಯಾಸ ನೀಡಿದರು. ರೇಖಾ ಕುರುವತ್ತಿ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಸಿ.ವಿ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಟಿ.ಬಿ.ಕಳಕರಡ್ಡಿ  ನಿರೂಪಿಸಿದರು. ಎಸ್.ಐ.ಡೊಣ್ಣಿ  ವಂದಿಸಿದರು.ರೋಣ ವರದಿ

ಸತ್ಯಾಗ್ರಹ ಹಾಗೂ ಅಹಿಂಸಾ ಅಸ್ತ್ರಗಳಿಂದಲೇ ಗಾಂಧೀಜಿ ಬ್ರಿಟಿಷರಿಗೆ ಸಿಂಹಸ್ವಪ್ನರಾದರೆ, ಸರಳತೆ, ಸಚ್ಚಾರಿ ತ್ರ್ಯದ ಮೂಲಕ ಜಗತ್ತಿನಾದ್ಯಂತ ಹೆಸರು ಮಾಡಿದರು ಎಂದು ತಹಶೀಲ್ದಾರ ಎಸ್.ಆರ್.ಕಡಿವಾಲರ ಹೇಳಿದರು.ಅವರು ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಶಿರಸ್ತೆದಾರ ಎನ್.ಎಸ್. ಕೂಡಲ್, ಬಿ.ಪಿ. ಮೇಲಿನಮನಿ, ಕಂದಾಯ ನಿರೀಕ್ಷಕರಾದ ರವಿ ಬಾರಕೇರ,         ಎಸ್.ಎಂ. ಭೂಮಕರ ಹಾಗೂ ಸಿಬ್ಬಂದಿ ಎಂ.ಪಿ. ನಾಯ್ಕ, ಎನ್.ಆರ್. ಜೋಷಿ, ದೊಡ್ಡಮನಿ, ಮ್ಯೋಗೇರಿ, ಚೌಧರಿ ಮತ್ತಿತರರು ಹಾಜರಿದ್ದರು.ಮುಳಗುಂದ ವರದಿ

ಮುಳಗುಂದ:
ಜೀವನದುದ್ದಕ್ಕೂ ಸರಳತೆ ಹಾಗೂ ಅಹಿಂಸಾ ಮಾರ್ಗ ಅಳವಡಿಸಿ ಕೊಂಡು ಮಹಾತ್ಮರಾದ ಗಾಂಧೀಜಿ ಅವರ ತತ್ವಾದರ್ಶಗಳನ್ನು ಪ್ರತಿ ಯೊಬ್ಬರು ನಿತ್ಯ ಜೀವನದಲ್ಲಿ ರೂಢಿಸಿ ಕೊಳ್ಳಬೇಕೆಂದು ಐಟಿಐ ಕಾಲೇಜಿನ ಕಾರ್ಯದರ್ಶಿ ಮಹಾಂತೇಶ ಬಾತಖಾನಿ ತಿಳಿಸಿದರು.ಅವರು ಸ್ಥಳಿಯ ಬಿ ಎ ಬಾತಖಾನಿ ಐಟಿಐ ಕಾಲೇಜಿನಲ್ಲಿ ಮಂಗಳವಾರ ಜರು ಗಿದ ರಾಷ್ಟ್ರಪಿತ ಮಹತ್ಮಾ ಗಾಂಧೀಜಿ ಯವರ 144 ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ  ಪಾಲ್ಗೊಂಡು ಮಾತನಾಡಿದರು.ಪಾಚಾರ್ಯ ಅನಿಲ ಬಿ.ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿ.ವಿ. ತಿಪ್ಪೆ ಸ್ವಾಮಿ, ಕಸ್ತೂರಿ ಹುಡೇದ, ಬಸವರಾಜ ಕುಬಿಹಾಳ, ಶಬ್ಬೀರಬಾಷ ಟಿಕ್ಕೇದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಪ್ರಾರಂಭದಲ್ಲಿ ಮಹಾತ್ಮ ಗಾಂಧೀಜಿ ಅವರ ಭಾವಚಿತ್ರಕ್ಕೆ ಪೂಜಿಸಿ ಪ್ರಾರ್ಥಿಸ ಲಾಯಿತು. ಬಸವರಾಜ ನಿಂಬ್ಬಣ್ಣವರ ನಿರೂಪಿಸಿದರು. ಸಂಗೀತಾ ಮಾಡಳ್ಳಿ ನಿರೂಪಿಸಿ ವಂದಿಸಿದರು.ಲಕ್ಷ್ಮೇಶ್ವರ ವರದಿ

ತಾಲ್ಲೂಕು ಪಡಿತರ ಮತ್ತು ಸೀಮೆ ಎಣ್ಣೆ ವಿತರಕರ ಸಂಘದ ವತಿಯಿಂದ ಮಂಗಳವಾರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಪಡಿತರ ವಿತರಕ ಮಹಾದೇವಗೌಡ ನರಸಮ್ಮನವರ ಗ್ರಾಹಕರಿಗೆ ತೊಂದರೆ ಆಗದ ರೀತಿಯಲ್ಲಿ ಪಡಿತರ ವಿತರಿಸಿದರೆ ನಾವು ಗಾಂಧೀಜಿ ಯವರ ತತ್ವ ಪಾಲಿಸಿದಂತಾಗುತ್ತದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ಬಸಣ್ಣ ಪುಟಾಣಿ ಅಧ್ಯಕ್ಷತೆ ವಹಿಸಿದ್ದರು.ಆಹಾರ ಇಲಾಖೆ ಅಧಿಕಾರಿ ದೊಡ್ಡಮನಿ, ಸಂಜೀವ ಬರಿ ಗಾಲಿ, ಮಹೇಶ ನಿರ್ವಾಣಶೆಟ್ರ, ಸುಮಿತ್ರಾ ಬಟಗುರ್ಕಿ, ಗೀತಾಂಜಲಿ ಗೋಪಾಳಿ, ಶಿವಪುತ್ರಪ್ಪ ವಿಭೂತಿ, ಎಸ್.ಎಸ್. ಹಿರೇಮಠ, ಬಿ.ವೈ ಮಕರಂದ, ರಾಜು ನರಗುಂದ, ಶಿವಯೋಗಿ ಹಮ್ಮಗಿ ಮತ್ತಿತರರು ಹಾಜರಿದ್ದರು. ರಘುಪತಿ ರಾಘವ ಭಜನೆ ಮಾಡಿದ ಯುವ ಕಾಂಗ್ರೆಸ್ ಕಾರ್ಯ ಕರ್ತರು: ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಿ.ಎಸ್. ಗಡ್ಡದೇವರ  ಮಠ ಅವರ ನಿವಾಸದಲ್ಲಿ ಮಂಗಳವಾರ ತಾಲ್ಲೂಕು ಯುವ ಕಾಂಗ್ರೆಸ್ ಘಟಕದ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಲಾಲಬಹಾದ್ದೂರ ಶಾಸ್ತ್ರೀಜಿ ಯವರ ಜಯಂತಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು `ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಂ~ ಭಜನೆ ಹಾಡಿದರು.ತಾಲ್ಲೂಕು ಯುವ ಘಟಕದ ಅಧ್ಯಕ್ಷ ಪರಮೇಶ್ವರ ಲಮಾಣಿ, ಸಂತೋಷ ದೇಸಾಯಿ, ಅಮರೇಶ ತೆಂಬದಮನಿ, ಮಾನಪ್ಪ ಲಮಾಣಿ, ಅಶೋಕ ಚಿತ್ರಗಾರ, ಸೋಮಶೇಖರಯ್ಯ ಕಲ್ಮಠ, ಶಿವ ಯೋಗೆಪ್ಪ ಚಂದರಗಿ, ಶಂಭು ಕೂಸನೂರುಮಠ, ನಾಗಪ್ಪ ಲಿಂಗಶೆಟ್ಟಿ, ಬಸವರಾಜ ಮಜ್ಜಿಗುಡ್ಡ ಸೇರಿದಂತೆ ಮತ್ತಿತರರು ಹಾಜರಿದ್ದರು.ನರಗುಂದ ವರದಿ

ನರಗುಂದ:
ಗಾಂಧಿ ಜಯಂತಿ ಅಂಗವಾಗಿ ಪಟ್ಟಣದ ಲಯನ್ಸ್ ಕ್ಲಬ್ ಹಾಗೂ ಹುಬ್ಬಳ್ಳಿ ಕಿಮ್ಸನ ಆಶ್ರಯದಲ್ಲಿ ಮಂಗಳ ವಾರ ರಕ್ತದಾನ ಶಿಬಿರ ನಡೆಯಿತು.ಉಚಿತ ತಪಾಸಣೆ ಮಾಡುವ ಮೂಲಕ ರಕ್ತದ ಗುಂಪಿನ ಕಾರ್ಡಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಜೆ.ವಿ.ಕಂಠಿ ಮಾತನಾಡಿದರು. ಈ ಸಂದರ್ಭದಲ್ಲಿ 40ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.  ಲಯನ್ಸ್ ಕ್ಲಬ್ ಹಾಗೂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ  ಬಸವರಾಜ ಪಾಟೀಲ, ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಕೆ.ಗುಜಮಾಗಡಿ, ವಿ.ಆರ್.ಗಡಾದ, ಸಿ.ಎಸ್.ಸಾಲೂಟಗಿಮಠ, ಡಾ.ಪ್ರಭು ನಂದಿ, ತವನೆಪ್ಪ ರೋಖಡೆ ಉಪಸ್ಥಿತರಿದ್ದರು.ರಡ್ಡೇರ ನಾಗನೂರ: ತಾಲ್ಲೂಕಿನ  ರಡ್ಡೇರನಾಗನೂರಿನಲ್ಲಿ ಮಂಗಳವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ನಡೆದ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ  ಶಾಸ್ತ್ರಿ ಯವರ  ಜಯಂತಿ ಹಮ್ಮಿಕೊಳ್ಳಲಾ ಗಿತ್ತು. ಕಾರ್ಯಕ್ರಮದಲ್ಲಿ ಸುರೇಶ ಬನ್ನಿಗಿಡದ ಮಾತನಾಡಿದರು. ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷ ಬಿ.ಜಿ.ಪಾಟೀಲ ಮಾತನಾಡಿದರು.ಈ ಸಂದರ್ಭದಲ್ಲಿ ಏರ್ಪಡಿಸಿದ್ದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಸುಷ್ಮಾ ಶಿವನಗೌಡ್ರ ತಂಡ ಪ್ರಥಮ, ಅಡಿವೆಪ್ಪ ಹಾದಿಮನಿ ತಂಡ ದ್ವಿತೀಯ ಸ್ಥಾನ ಪಡೆದರು. ಮಂಜುಳಾ ಯಾವಗಲ್ ತಂಡದ ಸದಸ್ಯರು ಪ್ರಾರ್ಥಿಸಿದರು.  ಅಧ್ಯಕ್ಷತೆಯನ್ನು  ಜಿ.ಬಿ.ಪೂಜಾರ ವಹಿಸಿದ್ದರು. ಶಂಕ್ರವ್ವ ಬಗಲಿ ಅತಿಥಿಗಳಾಗಿ ಉಪಸ್ಥಿತರಿದ್ದರು.ಎನ್.ಬಿ.ಗುದಗಾಪೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ  ಇರ್ಶಾದ್ ಅಹ್ಮದ  ಸ್ವಾಗತಿಸಿದರು. ಎಂ.ಬಿ.ಯಂಡಿ ಗೇರಿ ನಿರೂಪಿಸಿ, ವಂದಿಸಿದರು.ಕೊಣ್ಣೂರು: ಸ್ಥಳೀಯ  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯ ದಲ್ಲಿ ಮಂಗಳವಾರ ಗಾಂಧಿ ಜಯಂತಿ ಯನ್ನು ಹಮ್ಮಿಕೊಳ್ಳಲಾಗಿತ್ತು. ಬಿಜೆಪಿ ಮುಖಂಡ ಎಸ್.ಪಿ.ಯಲ್ಲಪ್ಪಗೌಡ್ರ ಮಾತನಾಡಿದರು.ಎಸ್.ಎಸ್. ಸಾಲಿ ಗೌಡ್ರ, ಎಂ.ಬಿ.ಕರಿಯಪ್ಪನವರ, ಕಲ್ಲಪ್ಪ ಪೂಜಾರ, ಆರ್.ವಿ.ಸಾಲಿಗೌಡ್ರ, ಎಂ.ಬಿ. ಯಲಿಗಾರ, ಎಸ್.ಬಿ.ಅವರಾದಿ, ಬಿ.ಎಂ. ಬಂದೋಜಿ, ಜಿ.ಡಿ.ಮುದಿಯಪ್ಪನವರ, ಬಿ.ವಿ.ಪಾಟೀಲ,ಎಚ್.ಸಿ.ಅಂಬಿಗೇರ, ಐ.ಎಸ್.ಉಪ್ಪಾರ, ಆರ್.ಬಿ.ಜಕ್ಕನವರ ಉಪಸ್ಥಿತರಿದ್ದರು. ಎಚ್.ಎಸ್. ದೊಡ ಮನಿ ನಿರೂಪಿಸಿ, ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry