ಸದನದಲ್ಲಿ ಬ್ಲೂ ಫಿಲಂ: ಸಚಿವತ್ರಯರ ತಲೆದಂಡ

7

ಸದನದಲ್ಲಿ ಬ್ಲೂ ಫಿಲಂ: ಸಚಿವತ್ರಯರ ತಲೆದಂಡ

Published:
Updated:

ಬೆಂಗಳೂರು: ಸದನ ನಡೆಯುತ್ತಿದ್ದಾಗಲೇ `ಬ್ಲೂ ಫಿಲಂ` ವೀಕ್ಷಿಸಿದ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಮತ್ತು ಕೃಷ್ಣ ಪಾಲೆಮಾರ್ ಅವರುಗಳು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಸದಾನಂದ ಗೌಡರಿಗೆ ತಮ್ಮ ಸಚಿವ ಸ್ಥಾನಗಳಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ.

 

ಮೂವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿರುವ ಮುಖ್ಯಮಂತ್ರಿಗಳು, ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ಕಳುಹಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಘಟನೆ ಹಿನ್ನೆಲೆ: ವಿಧಾನಮಂಡಲ ಅಧಿವೇಶನ ವೇಳೆ ಸಹಕಾರ ಸಚಿವ ಲಕ್ಷ್ಮಣ ಸವದಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ. ಪಾಟೀಲ ಮಂಗಳವಾರ ಸಂಜೆ ವಿಧಾನಸಭೆಯಲ್ಲಿ ಕುಳಿತೇ ಮೊಬೈಲ್‌ನಲ್ಲಿ `ಬ್ಲೂ ಫಿಲಂ` ವೀಕ್ಷಿಸಿದ ದೃಶ್ಯಗಳು ಸುದ್ದಿ ವಾಹಿನಿಗಳಲ್ಲಿ ಬಿತ್ತರಗೊಂಡವು.ಸದನದಲ್ಲಿ ಕುಳಿತು ಇವರು ಮೊಬೈಲ್ ಫೋನ್‌ನಲ್ಲಿ ನೋಡುತ್ತಿದ್ದ ಹಸಿಹಸಿ ಲೈಂಗಿಕ ದೃಶ್ಯಗಳು ಟಿ.ವಿ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕ ಪರಿಣಾಮ ಸಾರ್ವಜನಿಕ ವಲಯದಲ್ಲಿ ಕೋಲಾಹಲ ಉಂಟಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry