ಸದನದಲ್ಲಿ ಸೆಕ್ಸ್ ಫಿಲಂ ವೀಕ್ಷಣೆ: ಶಾಸಕ ಸ್ಥಾನ ರದ್ದುಗೊಳಿಸಲು ಆಗ್ರಹ

7

ಸದನದಲ್ಲಿ ಸೆಕ್ಸ್ ಫಿಲಂ ವೀಕ್ಷಣೆ: ಶಾಸಕ ಸ್ಥಾನ ರದ್ದುಗೊಳಿಸಲು ಆಗ್ರಹ

Published:
Updated:

ಗುಲ್ಬರ್ಗ: ವಿಧಾನ ಮಂಡಲ ಧಿವೇಶನದಲ್ಲಿ ಅಶ್ಲೀಲ ದೃಶ್ಯಗಳನ್ನು ವೀಕ್ಷಿಸಿದ ಶಾಸಕರಾದ ಲಕ್ಷ್ಮಣ ಸವದಿ, ಸಿ.ಸಿ. ಪಾಟೀಲ, ಕೃಷ್ಣ ಪಾಲೆಮಾರ್ ಅವರ ಶಾಸಕ ಸ್ಥಾನಗಳನ್ನು ಅನರ್ಹಗೊಳಿಸುವಂತೆ ಆಗ್ರಹಿಸಿ ಬುಧವಾರ ನಗರದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಜೆಡಿಎಸ್: ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಬಸವರಾಜ ತಡಕಲ್, ಸುಭಾಷ್ ರಾಠೋಡ, ರವೀಂದ್ರ ಕೋರಳ್ಳಿ, ಉದಯಕುಮಾರ ಜೇವರ್ಗಿ, ಚಂದ್ರಶೇಖರ ಸಂಗಾವಿ, ಸುರೇಶ ಭರಣಿ, ನಂದಕುಮಾರ ಮಾಲಿಪಾಟೀಲ, ದಿಲೀಪ ಮತ್ತಿತರರು ಭಾಗವಹಿಸಿದ್ದರು.ಯುವ ಕಾಂಗ್ರೆಸ್: ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಶಾಸಕರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ನಾಸೀರ್ ಹುಸೇನ್ ಉಸ್ತಾದ ಮತ್ತಿತರರು ಭಾಗವಹಿಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಜನವಾದಿ ಮಹಿಳಾ ಸಂಘಟನೆ: ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಸದಸ್ಯರು ಮಿನಿ ವಿಧಾನಸೌಧದ ಎದುರು ಶಾಸಕರ ಭಾವಚಿತ್ರ ದಹಿಸಿ ಪ್ರತಿಭಟನೆ ನಡೆಸಿದರು. ಕೆ. ನೀಲಾ, ಜಗದೇವಿ ನೂಲಕರ, ಶಶಿಕಲಾ ಕಡಗಂಚಿ, ಚಂದಮ್ಮ ಗೊಳ, ಅಮಿನಾ ಬೇಗಂ ಮತ್ತಿತರರು ಇದ್ದರು. ಸಿಪಿಐ ಜಿಲ್ಲಾ ಘಟಕ:  ಸಿಪಿಐ ಜಿಲ್ಲಾ ಮಂಡಳಿಯಿಂದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಶಾಸಕರ ಪ್ರತಿಕೃತಿ ದಹಿಸಲಾಯಿತು. ಶೌಕತ ಅಲಿ ಆಲೂರ, ಮೌಲಾಮುಲ್ಲಾ, ಸಿದ್ದಣ್ಣ ರಾಜವಾಳ, ಪ್ರಭುದೇವ ಯಳಸಂಗಿ, ಹಣಮಂತರಾಯ ಅಟ್ಟೂರ, ಪದ್ಮಾಕರ ಜಾನಿಬ್, ಮಹೇಶಕುಕುಮಾರ್ ರಾಠೋಡ, ಭೀಮಾಶಂಕರ ಮಾಡ್ಯಾಳ, ರಾಜೇಂದ್ರ ರಾಜವಾಳ, ಪದ್ಮಾವತಿ ಅಂಬೂರೆ, ಅಬ್ದುಲ್ ರಜಾಕ್, ಅಲ್ಲಾಸಾಬ ಎಂ. ಸಿಂದಗಿ, ಬಾಬು ಬಿ. ಪಾಟೀಲ, ವೀರೂಪಾಕ್ಷಪ್ಪ ತಡಕಲ್ ಮತ್ತಿತರರು ಇದ್ದರು.ವಿವಿಧ ಸಂಘಟನೆ: ಎಐಡಿಎಸ್‌ಒ, ಎಐಡಿವೈಒ ಹಾಗೂ ಎಐಎಂಎಸ್‌ಎಸ್ ಸಂಘಟನೆ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಎಸ್.ಎಂ. ಶರ್ಮಾ, ಮಹೇಶ ಎಸ್.ಬಿ., ಸೀಮಾ ಡಿ. ಮತ್ತಿತರು ಇದ್ದರು.ಜಯ ಕರ್ನಾಟಕ: ಜಯ ಕರ್ನಾಟಕ ಜಿಲ್ಲಾ ಘಟಕದಿಂದ ಟಾಯರ್‌ಗೆ ಬೆಂಕಿಹಾಕಿ ಪ್ರತಿಭಟನೆ ನಡೆಸಲಾಯಿತು. ಮಲ್ಲಿಕಾರ್ಜುನ ಸಾರವಾಡ ಮತ್ತಿತರರು ಇದ್ದರು.   ಕರವೇ (ಶೆಟ್ಟಿ ಬಣ): ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಜಿಲ್ಲಾ ಘಟಕದಿಂದ ಜಗತ್ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು. ಗುರುರಾಜ ಶಕ್ತಿ, ಮಂಜುನಾಥ ಎಸ್. ನಾಲವಾರಕರ, ಗೋಪಾಲ ಎನ್. ನಾಟೀಕಾರ, ಮಂಜುನಾಥ ಮಠಪತಿ,     ಅರವಿಂದ ನಾಟೀಕಾರ, ಮನೋಹರ ಕುಮಾರ ಬಿರನುರ ಮತ್ತಿತರರು ಇದ್ದರುಜ್ಞಾನಜ್ಯೋತಿ ಅಕಾಡೆಮಿ: ಎನ್.ಎಸ್. ಹಿರೇಮಠ ನೇತೃತ್ವದಲ್ಲಿ ಜ್ಞಾನ ಕ್ಯೋತಿ ಕರಿಯರ್ ಅಕಾಡೆಮಿಯಿಂದ  ಪ್ರತಿಭಟನೆ ನಡೆಸಲಾಯಿತು. ನೂರಾರು ಜನರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry