ಸದನದ ಮಾನ ಹರಾಜು: ಆಕ್ರೋಶ

7

ಸದನದ ಮಾನ ಹರಾಜು: ಆಕ್ರೋಶ

Published:
Updated:

ರೋಣ: ಪ್ರಜಾಪ್ರಭುತ್ವದ ದೇಗುಲ ವಿಧಾನಸಭೆ  ಗೌರವವನ್ನು  ಬಿಜೆಪಿ ಅನಾಗರಿಕ ಹಿನ್ನೆಲೆಯುಳ್ಳ ಶಾಸಕರು ಹಾಳು ಮಾಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹನಮಂತರಾವ್ ಹೇಳಿದರು.ಅವರು ಭಾನುವಾರ ರೋಣ ಪಟ್ಟಣದ ಆರ್.ಎಸ್ ಪಾಟೀಲ ಜಿನ್ನಿಂಗ್ ಫ್ಯಾಕ್ಟರಿಯ ಆವರಣದಲ್ಲಿ ನಡೆದ ರೋಣ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ರಾಜ್ಯ ಭ್ರಷ್ಟಾಚಾರಿಗಳಿಂದ, ಮೋಸಗಾರರಿಂದ, ಅತ್ಯಾಚಾರಿಗಳಿಂದ ತಲೆತಗ್ಗಿ ಸುವಂತಾಗಿದೆ. ಹೀನಕೃತ್ಯವುಳ್ಳವರು ರಾಜ್ಯವನ್ನು ಆಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಸರ್ಕಾರದಲ್ಲಿ ಬರೀ ಲೂಟಿಕೋರರು, ಹಗಲುಗಳ್ಳರು ತುಂಬಿದ್ದಾರೆ, ಪಕ್ಷದ ಅಧಿನಾಯಕಿ, ಸುಷ್ಮಾ ಸ್ವರಾಜ್ ವರಮಹಾಲಕ್ಷ್ಮಿ ಪೂಜೆಯ ನೆಪಮಾಡಿ ಬಳ್ಳಾರಿಯ ದರೋಡೆಕೋರರಾದ ರಡ್ಡಿಗಳಿಂದ ಪ್ರತಿವರ್ಷ 3ರಿಂದ 4ಕೆ.ಜಿ. ಬಂಗಾರವನ್ನು ಪಡೆದುಕೊಂಡು ಹೋದರು ಎಂದು ಆರೋಪಿಸಿದರು.  ಬೇನಾಮಿ ಹಣ ಗಳಿಸಿದವರು ಭೂಕಬಳಿಕೆ ಮಾಡಿದವರು ಜೈಲುಪಾಲಾಗಿದ್ದಾರೆ. ಇಂತವರು ಜೈಲಿನಿಂದ ಬಿಡುಗಡೆಗೊಂಡಾಗ ಅವರನ್ನು ಸ್ವಾಗತಿಸಿದ ಪರಿ ನಾಗರಿಕ ಸಮಾಜವನ್ನು ಅಣಕಿಸುವಂತೆ ಮಾಡಿದೆ ಎಂದರು. 

ಸದನದಲ್ಲಿ ನೀಲಿ ಚಿತ್ರಗಳನ್ನು ವೀಕ್ಷಣೆ ಮಾಡಿದ ಶಾಸಕರು, ಅತ್ಯಾಚಾರಕ್ಕೆ ಯತ್ನಿಸಿದ ಹಾಲಪ್ಪ, ಅನೈತಿಕ ಮಾರ್ಗ ತುಳಿದ ಸಚಿವ ರೇಣುಕಾಚಾರ್ಯ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಕನ್ನಡ ನಾಡಿನ ಸಂಸ್ಕೃತಿ ರಕ್ಷಿಸಿ ಎಂದರು.ಮಾಜಿ ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ನಾಡಿನಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸಿ ರಾಜ್ಯವನ್ನು ಅರಾಜಕತೆಗೆ ತಳ್ಳುವಂತಹ ವ್ಯವಸ್ಥಿತ ಪಿತೂರಿಯನ್ನು ಆರ್‌ಎಸ್‌ಎಸ್ ರೂಪಿಸಿದೆ ಎಂದು ಆರೋಪಿಸಿದರು. ಸಿಂಧಗಿಯಲ್ಲಿ ಆರ್‌ಎಸ್‌ಎಸ್ ಮತ್ತು ಶ್ರಿರಾಮಸೇನೆ ಕಾರ್ಯಕರ್ತರು ಪಾಕಿಸ್ತಾನದ ಧ್ವಜವನ್ನು ಹಾರಿಸುವ ಮೂಲಕ ತಮ್ಮ ಇನ್ನೊಂದು ಮುಖ ಪ್ರದರ್ಶಿಸಿದ್ದಾರೆ.ಅತಿವೃಷ್ಠಿಗೆ ಒಳಗಾದ ನಿರಾಶ್ರಿತರ ಕುಟುಂಬಗಳಿಗೆ ಪುನರ್ ವಸತಿ ಕಲ್ಪಿಸಲು ರಾಜ್ಯಾದ್ಯಂತ ವಿವಿಧ ಮೂಲಗಳಿಂದ ಸಂಗ್ರಹವಾದ ಹಣದ ಜೊತೆಗೆ ಕೆಂದ್ರ ಸರ್ಕಾರ 1800 ಕೋಟಿ ಸೇರಿ ಒಟ್ಟು 3ಸಾವಿರ ಕೋಟಿ ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು.ಸಭೆಯಲ್ಲಿ ಕೆ.ವೆಂಕಟೇಶಗೌಡ, ವಿಧಾನ ಪರಿಷತ್ ಸದಸ್ಯ ಶ್ರಿನಿವಾಸ ಮಾನೆ, ಮಾಜಿ ಸಂಸದ ಆರ್.ಎಸ್.ಪಾಟೀಲ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಸ ಜಿ.ಎಸ್.ಗಡ್ಡದೇವರ ಮಠ ಮಾತನಾಡಿದರು.ಮಾಜಿ ಶಾಸಕ ಜಿ.ಎಸ್.ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಚಿವ ಬಿ.ಆರ್.ಯಾವಗಲ್ಲ, ಟಿ.ಈಶ್ವರ, ವಾಸಣ್ಣ ಕುರಡಗಿ, ಐ.ಎಸ್.ಪಾಟೀಲ, ಎಚ್.ಆರ್.ನಾಯಕ,ಜಿ.ಪಂ.ವಿರೋಧ ಪಕ್ಷದ ನಾಯಕ ಹೇಮಗಿರೀಶ ಹಾವನಾಳ, ಆರ್.ಬಿ.ಬಸವರಡ್ಡೇರ ಸೇರಿದಂತೆ ಮತ್ತಿತರರು ಉಪಸ್ಥಿತರಿ ್ದದರು. ವಿ.ಬಿ.ಸೋಮನಕಟ್ಟಿಮಠ ನಿರೂಪಿಸಿದರು, ಮಿಥುನ ಪಾಟೀಲ ವಂದಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry