ಶನಿವಾರ, ಏಪ್ರಿಲ್ 17, 2021
31 °C

ಸದನ ಮುಂದೂಡಿಕೆ: ಮೂರನೇ ದಿನ ಕಲಾಪ ನುಂಗಿ ಹಾಕಿದ ಕಲ್ಲಿದ್ದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ


(ಐಎಎನ್ಎಸ್): ~ಕಲ್ಲಿದ್ದಲು~ ಗದ್ದಲವು ಸಂಸತ್ತಿನಲ್ಲಿ ಗುರುವಾರ ಮತ್ತೊಮ್ಮೆ ಪ್ರತಿಧ್ವನಿಸಿದ ಪರಿಣಾಮ ಎರಡೂ ಸದನಗಳ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಯಿತು.

ವಿರೋಧ ಪಕ್ಷದವರು ಮೂರನೇ ದಿನವಾದ ಗುರುವಾರವೂ ಪ್ರಧಾನಿ ಮನಮೋಹನ್ ಸಿಂಗ್ ಅವರ ರಾಜೀನಾಮೆಗೆ ಬಿಗಿಪಟ್ಟು ಹಿಡಿದು ಪ್ರತಿಭಟಿಸಿದ ಕಾರಣ ಉಭಯ ಸದನಗಳನ್ನು ಮಧ್ಯಾಹ್ನದವರೆಗೆ ಮುಂದೂಡಿದ ಪ್ರಸಂಗ ನಡೆಯಿತು


.

 


ಬೆಳಿಗ್ಗೆ 11ಕ್ಕೆ ಲೋಕಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಪಕ್ಷದ ಸದಸ್ಯರು ಸದನದ ಕಲಾಪ ನಡೆಯಲು ಅನುಮತಿ ನೀಡದೆ, ಪ್ರಧಾನಿ ಅವರು ರಾಜೀನಾಮೆಯನ್ನು ನೀಡಲೇ ಬೇಕು ಎಂದು ಘೋಷಣೆಯನ್ನು ಕೂಗಿ, ಗದ್ದಲ. ಇದರಿಂದ ಸ್ಪೀಕರ್ ಮೀರಾ ಕುಮಾರಿ ಅವರು ಸದನವನ್ನು ಮಧ್ಯಾಹ್ನದವರೆಗೆ ಮುಂದೂಡಿದರು.

 


ಎಬ್ಬಿಸಿ ಪ್ರತಿಭಟನೆಯನ್ನು ನಡೆಸಿದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.