ಸದಾನಂದಗೌಡರಿಂದ ರಾಜೀನಾಮೆ ಸಲ್ಲಿಕೆ
ಬೆಂಗಳೂರು: ಮುಖ್ಯಮಂತ್ರಿ ಡಿ.ಸದಾನಂದ ಗೌಡರು ಇಂದು ಬೆಳಿಗ್ಗೆ ತಮ್ಮ ಬೆಂಬಲಿಗ ಸಚಿವರು, ಶಾಸಕರು ಹಾಗು ಅಪಾರ ಅಭಿಮಾನಿಗಳೊಂದಿಗೆ `ಅನುಗ್ರಹ~ ದಿಂದ ರಾಜಭವನಕ್ಕೆ ಮೆರವಣಿಗೆಯಲ್ಲಿ ಹೊರಟು ರಾಜ್ಯಪಾಲ ಹಂಸರಾಜ ಭಾರದ್ವಜ್ ಅವರಿಗೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಿದರು.
ಯಡಿಯೂರಪ್ಪನವರು ರಾಜೀನಾಮೆ ಸಲ್ಲಿಸಿದ ರೀತಿಯಲ್ಲಿಯೇ ಸದಾನಂದಗೌಡರು ಸಹ ಬೆಳಿಗ್ಗೆ `ಅನುಗ್ರಹ~ ದಿಂದ ಹೊರಟು ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರ, ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.
ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಸದಾನಂದಗೌಡರು ತಮ್ಮ ಅಧಿಕಾರಾವಧಿಯಲ್ಲಿ ತಮಗೆ ಸಹಕಾರ ನೀಡಿದ ತಮ್ಮ ಸಚಿವ ಸಂಪುಟದ ಸದಸ್ಯರಿಗೆ, ಮಾಧ್ಯಮ ಮಿತ್ರರಿಗೆ, ಅಧಿಕಾರಿಗಳಿಗೆ ತಮ್ಮ ಕೃತಜ್ಞತೆ ತಿಳಿಸಿದರು.
ಮುಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗು ಅವರ ಸಂಪುಟಕ್ಕೆ ಚಾಮುಂಡಿದೇವಿ ಒಳ್ಳೆಯದನ್ನು ಮಾಡಲಿ, ಮುಂದಿನ 10 ತಿಂಗಳ ಶೆಟ್ಟರ್ ಆಡಳಿತ ಅವಧಿಯಲ್ಲಿ ನೆನಪಿನಲ್ಲಿ ಉಳಿಯುವಂತಹ ಕೆಲಸಗಳಾಗಲೆಂದು ಶುಭ ಹಾರೈಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.