ಭಾನುವಾರ, ಜೂನ್ 20, 2021
29 °C

ಸದಾನಂದ ಗೌಡ ಸಭಾ ನಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ವಿಧಾನ ಪರಿಷತ್‌ನ ಸಭಾನಾಯಕರಾಗಿ ನೇಮಕಗೊಂಡಿದ್ದಾರೆ.ಸೋಮವಾರ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು, ಸದಾನಂದ ಗೌಡ ಅವರನ್ನು ಸಭಾ ನಾಯಕರನ್ನಾಗಿ ನೇಮಕ ಮಾಡಿರುವುದನ್ನು ಪ್ರಕಟಿಸಿದರು. ಮುಖ್ಯಮಂತ್ರಿಯವರ ಅನುಪಸ್ಥಿತಿಯಲ್ಲೇ ಈ ನೇಮಕ ಪ್ರಕಟವಾಯಿತು.ಸಭಾನಾಯಕರ ನೇಮಕಾತಿಯನ್ನು ಪ್ರಕಟಿಸಿದಾಗ ಆಡಳಿತ ಪಕ್ಷದ ಯಾವೊಬ್ಬ ಸದಸ್ಯರೂ ಸ್ವಾಗತಿಸಲಿಲ್ಲ. ಎಲ್ಲರೂ ಮೌನಕ್ಕೆ ಶರಣಾಗಿದ್ದರು. ಈ ವರ್ತನೆಗೆ ಕಾಂಗ್ರೆಸ್ ಸದಸ್ಯ ವೀರಣ್ಣ ಮತ್ತಿಕಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.`ಸದನದ ನಾಯಕರನ್ನು ಘೋಷಣೆ ಮಾಡುವಾಗ ಸಂತೋಷದಿಂದ ಸ್ವಾಗತಿಸುವುದು ಸಂಪ್ರದಾಯ. ವಿರೋಧ ಪಕ್ಷದವರಾಗಿ ನಾವು ಸ್ವಾಗತಿಸುತ್ತಿದ್ದೇವೆ. ಇತಿಹಾಸದಲ್ಲಿ ಮೊದಲ ಬಾರಿಗೆ ನೀವು ಬೇರೆ ಹಾದಿ ತುಳಿದಿದ್ದೀರಿ~ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆದರೂ, ಆಡಳಿತ ಪಕ್ಷದಿಂದ ಸರಿಯಾದ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.