ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

7

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

Published:
Updated:

ಸಿರುಗುಪ್ಪ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನು್ನ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಇಲಿ್ಲಯ ಮಾದಿಗ ಛಲವಾದಿ ಒಳ ಮೀಸಲಾತಿ ಹೋರಾಟ ಸಮಿತಿ ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿದ್ದಾರೆ.ಪಟ್ಟಣದ ತಾಲ್ಲೂಕು ಕಚೇರಿ ಎದುರು ಮಾದಿಗ ದಂಡೋರ ಮತು್ತ ಮಾದಿಗ ಛಲವಾದಿ ಒಳಮೀಸಲಾತಿ ಹೋರಾಟ ಸಮಿತಿಯವರು ಸೋಮ ವಾರ ಧರಣಿ ಸತ್ಯಾಗ್ರಹ ಹಮಿ್ಮಕೊಂಡು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.ರಾಜ್ಯದಲ್ಲಿರುವ ಸುಮಾರು ಒಂದು ಕೋಟಿ ದಲಿತರಲಿ್ಲ 84 ಲಕ್ಷ ಹೊಲೆ ಮಾದಿಗರು ಇದ್ದು, ಇವರಿಗೆ ಒಳ ಮೀಸ ಲಾತಿ ಸೌಲಭ್ಯ ದೊರಕ ಬೇಕಾದರೆ ಸದಾಶಿವ ಆಯೋಗದ ವರದಿ ಅನುಷ್ಠಾನಗೊಳ್ಳಬೇಕಾಗಿದೆ ಎಂದು ಮಾದಿಗ ದಂಡೋರ ಸಮಿತಿಯ ಅಧ್ಯಕ್ಷ ಎಂ.ವೀರೇಶ ತಿಳಿಸಿದರು.10,450 ಜನ ಗ್ರಾಮ ಸಹಾಯಕರನು್ನ ಡಿ ಗ್ರೂಪ್‌ ನೌಕರರು ಎಂದು ಪರಿಗಣಿಸಬೇಕು, ಪೌರ ಕಾರ್ಮಿಕ ಗುತ್ತಿಗೆ ಪದ್ಧತಿಯನು್ನ ರದ್ದು ಮಾಡಿ ಅಂತಹ ಪೌರಕಾರ್ಮಿಕರನು್ನ, ಎಲ್ಲಾ ಇಲಾಖೆಗಳಲ್ಲಿ ದಿನಗೂಲಿ, ಸಫಾರಿ ಮತ್ತು ಅರೆಕಾಲಿಕ ನೌಕರರನು್ನ ಕಾಯಂಗೊಳಿಸಬೇಕು, ಚರ್ಮ ಕುಶಲ ಕರ್ಮಿ ಕೆಲಸಗಾರರಿಗೆ ವಿಶೇಷ ಸೌಲಭ್ಯ ಗಳನ್ನು ಒದಗಿಸಬೇಕು ಎಂದು ಅವರು ಕೋರಿದ್ದಾರೆ.ಸಮಿತಿಯ ಮುಖಂಡರಾದ ಮುನಿ ಸ್ವಾಮಿ, ಎಚ್‌.ಬಿ.ಗಂಗಪ್ಪ, ಕೆ.ಮಲ್ಲಪ್ಪ, ವೈ.ಶ್ರೀನಿವಾಸ, ಕೆ.ಹನುಮಂತಪ್ಪ, ಡಿ.ಬಸಪ್ಪ, ಸಿದ್ದಪ್ಪ, ಲಕ್ಷ್ಮಣ, ಕೆ.ಸಣ್ಣಮಲ್ಲಪ್ಪ, ಎಂ.ಮಹಾದೇವ, ರಾಯುಡು, ಚಿದಾನಂದ, ಕೃಷ್ಣಪ್ಪ, ದ್ಯಾವಣ್ಣ, ಲಲಿತ, ರಾಮಪ್ಪ ಮುಂತಾದವರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry