ಗುರುವಾರ , ಜೂನ್ 24, 2021
28 °C

ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಾಪಟ್ಟಣ: ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ಮೀಸಲಾತಿ ವರದಿ ಜಾರಿಗೊಳಿಸಬೇಕು ಎಂದು ತಾಲ್ಲೂಕು ಮಾದಿಗ ದಂಡೋರ ಸಮಿತಿ ಮುಖಂಡ ಬಿ.ಮೋಹನದಾಸ್‌ ಒತ್ತಾಯಿಸಿದರು.ಭಾನುವಾರ ಇಲ್ಲಿ ನಡೆದ ಮಾದಿಗ ದಂಡೋರ ಸಮಿತಿಯ ಸಭೆ ಉದ್ದೇಶಿಸಿ  ಅವರು ಮಾತನಾಡಿದರು.ಈ ಹಿಂದಿನ ಮೀಸಲಾತಿ ಶಾಸನಗ ಳಿಂದ ಜನಾಂಗಕ್ಕೆ ತುಂಬಾ ಅನ್ಯಾಯ ವಾಗಿದೆ. ಸಮುದಾಯದ ಜನರು ಅನಕ್ಷರತೆ, ನಿರುದ್ಯೋಗ, ಬಡತನ ಗಳಿಂದ ಹೊರಬಂದಿಲ್ಲ. ನಿವೃತ್ತ ನ್ಯಾಯಮೂರ್ತಿ ಸದಾಶಿವ ಆಯೋಗವು ಮಾದಿಗ ಜನಾಂಗಕ್ಕೆ ನ್ಯಾಯ ಒದಗಿಸುವ ವರದಿ ನೀಡಿದ್ದರೂ, ಸರ್ಕಾರ ಅದನ್ನು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿಲ್ಲ. ಇದರಿಂದ ಸಾಮಾಜಿಕ ಸ್ಥಾನಮಾನ ಪಡೆಯುವಲ್ಲಿ ತೊಂದರೆಗೆ ಒಳಗಾಗುತ್ತಿವೆ ಎಂದರು.ಜಿಲ್ಲಾ ಮಾದಿಗ ದಂಡೋರ ಸಮಿತಿ ಉಪಾಧ್ಯಕ್ಷ ಬಿ.ದೇವೇಂದ್ರಪ್ಪ ಮಾತನಾಡಿ, ಮಾದಿಗರ ಕೇರಿಗಳಲ್ಲಿ ಮೂಲಸೌಕರ್ಯ ಇಲ್ಲದೇ  ರೋಗ ಕಾಣಿಸಿಕೊಳ್ಳುತ್ತಿವೆ. ಮಾದಿಗ ಜನಾಂಗಕ್ಕೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿದಾಗ ಈ ಸಮಸ್ಯೆ ದೂರವಾಗಲು ಸಾಧ್ಯ ಎಂದರು.ಬಸವಾಪಟ್ಟಣ ಹೋಬಳಿ ಘಟಕದ ಅಧ್ಯಕ್ಷ ಡಿ.ಕೆ.ಹನುಮಂತಪ್ಪ, ಡಿ.ಎಸ್‌.ಎಸ್‌.ಮುಖಂಡ ಎಚ್‌.ಬಿ. ಅಣ್ಣಪ್ಪ, ಸಮಿತಿ ಸದಸ್ಯರಾದ ಕೆ.ಬಿ.ಕೃಷ್ಣಮೂರ್ತಿ, ನಾಗರಾಜಪ್ಪ, ಚಂದ್ರಪ್ಪ ಮಾತನಾಡಿದರು. ಎ.ಕೆ.ಹಾಲೇಶ್‌ ಸ್ವಾಗತಿಸಿದರು. ಎಚ್‌.ರವಿಕುಮಾರ್‌ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.